IND vs WI : ಧೋನಿಯ 17 ವರ್ಷಗಳ ದಾಖಲೆ ಉಡೀಸ್ ಮಾಡಿದ ಅಕ್ಷರ್
ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಅಕ್ಷರ್ ಪಟೇಲ್ ಆಲ್ ರೌಂಡ್ ಪ್ರದರ್ಶನದೊಂದಿಗೆ ಅಬ್ಬರಿಸಿದ್ರು.
ಬೌಲಿಂಗ್ ನಲ್ಲಿ ಕೇವಲ ಒಂದೇ ಒಂದು ವಿಕೆಟ್ ಪಡೆದ ಅಕ್ಷರ್, ಬ್ಯಾಟಿಂಗ್ ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದರು.
ಕೇವಲ 35 ಎಸೆತಗಳನ್ನು ಎದುರಿಸಿದ ಪಟೇಲ್ 64 ರನ್ ಚಚ್ಚಿ ಅಜೇಯರಾಗಿ ಉಳಿದ್ರು.
ಅಲ್ಲದೇ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಅವರ ಇನ್ನಿಂಗ್ಸ್ ನಲ್ಲಿ ಮೂರು ಬೌಂಡರಿ, ಐದು ಸಿಕ್ಸರ್ ಗಳಿವೆ.
ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಅಕ್ಷರ್ ಪಟೇಲ್ 17 ವರ್ಷಗಳ ಎಂ.ಎಸ್.ಧೋನಿ ಅವರ ದಾಖಲೆಯನ್ನು ಪುಡಿಗಟ್ಟಿದರು.
ಏಕದಿನ ಕ್ರಿಕೆಟ್ ನಲ್ಲಿ ಗುರಿ ಚೇಸ್ ಮಾಡಿ ಗೆಲುವು ಸಾಧಿಸಿದ ತಂಡದ ಪರ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್ ಗೆ ಬಂದು ಅತ್ಯಧಿಕ ಸಿಕ್ಸರ್ ಗಳನ್ನು ಬಾರಿಸಿದ ಆಟಗಾರನಾಗಿ ಅಕ್ಷರ್ ಪಟೇಲ್ ದಾಖಲೆ ನಿರ್ಮಿಸಿದ್ದಾರೆ.
ವಿಂಡೀಸ್ ವಿರುದ್ಧದ ಮ್ಯಾಚ್ ನಲ್ಲಿ ಅಕ್ಷರ್ ಪಟೇಲ್ ಈ ಘನತೆ ಸಾಧಿಸಿದ್ದಾರೆ.
ಇನ್ನು 2005ರಲ್ಲಿ ಜಿಂಬಾಬೆ ವಿರುದ್ಧ ಮೂರು ಸಿಕ್ಸರ್ ಗಳನ್ನು ಸಿಡಿಸಿದ್ದ ಧೋನಿ ಹೆಸರಲ್ಲಿ ಇಲ್ಲಿಯವರೆಗೂ ಈ ದಾಖಲೆ ಇತ್ತು.
ಅದೇ ರೀತಿ ಭಾರತ ತಂಡದ ಮಾಜಿ ಆಲ್ ರೌಂಡರ್ ಯೂಸೆಫ್ ಪಠಾಣ್ ಕೂಡ 2011ರಲ್ಲಿ ಮೂರು ಸಿಕ್ಸರ್ ಗಳನ್ನು ಬಾರಿಸಿದ್ದರು.
ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಈ ಇಬ್ಬರ ದಾಖಲೆಯನ್ನು ಪುಡಿಗಟ್ಟಿದ್ದಾರೆ.
ಇದು ಹೀಗಿದ್ದರೇ ವಿಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯ ಗೆಲ್ಲುವ ಮೂಲಕ ಭಾರತ ಕ್ರಿಕೆಟ್ ತಂಡ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿಯನ್ನು ವಶಪಡಿಸಿಕೊಂಡಿದೆ.