Ayali : Zee5 ನಲ್ಲಿ ‘ಅಯಾಲಿ’ ಸೀರೀಸ್ – ದುಲ್ಕರ್ ಸಲ್ಮಾನ್, ವಿಜಯ್ ಸೇತುಪತಿ ಸೇರಿದಂತೆ ಹಲವರಿಂದ ಪ್ರಶಂಸೆ
ದೇಶದ ಅತಿದೊಡ್ಡ ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಜೀ5 ನಲ್ಲಿ ‘ಅಯಾಲಿ’ ತಮಿಳು ಸೀರೀಸ್ ಬಿಡುಗಡೆಯಾಗಿದೆ. ತಮಿಳಿನ ಹದಿಹರೆಯದ ಹುಡುಗಿ ಸೆಲ್ವಿ ಸಮಾಜದಲ್ಲಿರುವ ಸಂಪ್ರದಾಯ ಮತ್ತು ನಂಬಿಕೆಗಳ ವಿರುದ್ಧ ಹೋರಾಡುವ ಕಥಾಹಂದರ ‘ಅಯಾಲಿ’ ಸೀರೀಸ್ ನಲ್ಲಿದೆ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಹಾಗೂ ಅಂತರಾಷ್ಟ್ರೀಯ ಶಿಕ್ಷಣ ದಿನ ಅಂಗವಾಗಿ ‘ಅಯಾಲಿ’ ಸೀರೀಸ್ ಜೀ5ನಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ.
ದುಲ್ಕರ್ ಸಲ್ಮಾನ್, ವೆಂಕಟ್ ಪ್ರಭು, ವಿಜಯ್ ಸೇತುಪತಿ, ಮಿತ್ರನ್ ಆರ್ ಜವಹಾರ್, ನಿರ್ದೇಶಕ ಪ್ರಶಾಂತ್ ಸೇರಿದಂತೆ ಹಲವು ತಾರೆಯರು ‘ಅಯಾಲಿ’ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎಸ್ ಕುಷ್ಮಾವತಿ ಎಸ್ಟ್ರೆಲ್ಲಾ ಸ್ಟೋರಿಸ್ ಬ್ಯಾನರ್ ನಡಿ ಅಯಾಲಿ ಸರಣಿಯನ್ನು ನಿರ್ಮಾಣ ಮಾಡಿದ್ದು, ಮುತ್ತುಕುಮಾರ್ ನಿರ್ದೇಶನ ಮಾಡಿದ್ದಾರೆ. ‘ಅಯಾಲಿ’ ಸರಣಿ ಎಂಟು ಎಪಿಸೋಡ್ ಗಳನ್ನು ಒಳಗೊಂಡಿದ್ದು, ಅಬಿ ನಕ್ಷತ್ರ, ಅನುಮೋಲ್, ಅರುವಿ ಮದನ್, ಲಿಂಗ ಮತ್ತು ಸಿಂಗಂಪುಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಅಯಾಲಿ’ ಹದಿಹರೆಯದ ಹುಡುಗಿಯೊಬ್ಬಳು ವೈದ್ಯಳಾಗುವ ಕನಸು ಕಾಣುವ ಸೋಶಿಯಲ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡಿದೆ. ಆಕೆಯ ಊರು ವೀರಪಣೈನಲ್ಲಿ ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಮದುವೆಯಾಗಬೇಕು ಇಲ್ಲವಾದಲ್ಲಿ ಅಯಾಲಿ ದೇವಿಯೂ ಕೋಪಗೊಂಡು ಹಳ್ಳಿಯ ಜನರನ್ನು ಶಪಿಸುತ್ತಾಳೆ ಎಂಬ ನಂಬಿಕೆ. ಈ ಪುರಾತನ ನಂಬಿಕೆ, ಸಂಪ್ರದಾಯಗಳನ್ನು ದಾಟಿ, ವಿರೋಧಗಳನ್ನು ಎದುರಿಸುತ್ತಾ, ಹೋರಾಡುತ್ತಾ ಆಕೆ ವೈದ್ಯೆಯಾಗುವ ಗುರಿಯತ್ತ ಸಾಗುವ ಕಥೆ ಇದರಲ್ಲಿದೆ. ಲಕ್ಷ್ಮಿ ಪ್ರಿಯಾ, ಸೃತಿ ವೆಂಕಟ್, ಭಗವತಿ ಪೆರುಮಾಳ್ ಅಯಾಲಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಾಮಾಜಿಕ ಸಂದೇಶ, ಒಂದೊಳ್ಳೆ ಸಬ್ಜೆಕ್ಟ್ ಒಳಗೊಂಡ ಅಯಾಲಿ ಸೀರೀಸ್ ಜೀ5ನಲ್ಲಿ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಲಭ್ಯವಿದೆ.
ಜೀ5 ದೇಶದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಬಹು ಬೇಡಿಕೆ ಸೃಷ್ಟಿಸಿಕೊಂಡ ಒಟಿಟಿ ಪ್ಲ್ಯಾಟ್ ಫಾರ್ಮ್ ಆಗಿದೆ. ಮನರಂಜನಾ ಆಸಕ್ತರಿಗೆ ಬಹುಭಾಷೆಯಲ್ಲಿ ಮನರಂಜನೆಯನ್ನು ನೀಡುತ್ತಿದೆ. 3500 ಸಿನಿಮಾಗಳು, 1750 ಟಿವಿ ಶೋ, 700 ಸೀರೀಸ್ ಹಾಗೂ 5ಲಕ್ಷಕ್ಕೂ ಹೆಚ್ಚಿನ ಅವಧಿಯ ಬೇಡಿಕೆಯ ಕಂಟೆಂಟ್ ಒಳಗೊಂಡಿದೆ. ಕನ್ನಡ, ಇಂಗ್ಲೀಷ್, ಹಿಂದಿ, ಬೆಂಗಾಲಿ, ಮರಾಠಿ, ಬೋಜ್ ಪುರಿ ಸೇರಿದಂತೆ 12 ಭಾಷೆಯಲ್ಲಿ ಜೀ5 ನೋಡುಗರಿಗೆ ಮನರಂಜನೆ ನೀಡುತ್ತಿದೆ. ದೇಶಿಯ ಹಾಗೂ ಅಂತರಾಷ್ಟ್ರೀಯ ಸಿನಿಮಾಗಳು, ಮ್ಯೂಸಿಕ್, ಕಿಡ್ಸ್ ಶೋ, ಆರೋಗ್ಯ ಮತ್ತು ಜೀವನ ಶೈಲಿ, ಸುದ್ದಿ ಸಮಾಚಾರ ಸೇರಿದಂತೆ ಎಲ್ಲಾ ರೀತಿಯ ಮನರಂಜನೆಗೆ ಜೀ5 ಬಹು ದೊಡ್ಡ ವೇದಿಕೆಯಾಗಿದೆ.