ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನೆರವೇರಿದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಭಾಗಿಯಾಗಿದ್ದರು. ಅದರಂತೆ ಯೋಗಗುರು ಯೋಗಪೀಠದ ಸಂಸ್ಥಾಪಕರಾದ ಬಾಬಾ ರಾಮದೇವ್ ಅವರು ಸಹ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ನೇರವಾಗಿ ಶಿಲಾನ್ಯಾಸ ಕಾರ್ಯವನ್ನು ವೀಕ್ಷಣೆ ಮಾಡಿದ ಬಳಿಕ ಈ ವಿಚಾರವಾಗಿ ಮಾತನಾಡಿರುವ ಬಾಬಾ ರಾಮದೇವ್ ಅವರು ರಾಮಮಂದಿರ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಿದ್ದು, ನಮ್ಮ ಅದೃಷ್ಟ. ರಾಮರಾಜ್ಯ ಸ್ಥಾಪನೆಗೆ ಪೂರಕವಾಗಿ ಪತಂಜಲಿ ಯೋಗ ಪೀಠ ಕೂಡ ಶ್ರಮವಹಿಸಲಿದ್ದು, ಅಯೋಧ್ಯೆಯಲ್ಲೇ ದೊಡ್ಡ ಗುರುಕುಲವೊಂದನ್ನು ಸ್ಥಾಪಿಸುತ್ತೇವೆ ಎಂದು ಇದೇ ವೇಳೆ ಬಾಬಾ ರಾಮದೇವ್ ಅವರು ಘೋಷಿಸಿದ್ದಾರೆ.ಈ ಗುರುಕುಲದಲ್ಲಿ ವೇದ ಅಧ್ಯಯನ, ಆಯುರ್ವೇದ ಅಧ್ಯಯನಕ್ಕೆ ಅವಕಾಶ ಇರಲಿದೆ ಎಂದು ತಿಳಿಸಿದ್ದಾರೆ.








