ಟೀಮ್ ಇಂಡಿಯಾದ ಕೋಚ್ ಅಗಲು ಮಹಮ್ಮದ್ ಅಜರುದ್ದೀನ್ ರೆಡಿಯಂತೆ…!
ಮಹಮ್ಮದ್ ಅಜರುದ್ದೀನ್.. ಭಾರತದ ಸ್ಟೈಲೀಶ್ ಕ್ರಿಕೆಟಿಗ. ಅದ್ಭುತ ಬ್ಯಾಟ್ಸ್ಮೆನ್. ಅತ್ಯಬ್ಭುತ ಫೀಲ್ಡರ್. ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಭಾರತವನ್ನು ಮುನ್ನಡೆಸಿದ್ದ ಏಕೈನ ನಾಯಕ. ಹೀಗೆ ವಿಶ್ವ ಕ್ರಿಕೆಟ್ಗೆ ಅಜರುದ್ದೀನ್ ಕೊಡುಗೆ ಅಪಾರ. ಆದ್ರೆ ಮ್ಯಾಚ್ ಫಿಕ್ಸಿಂಗ್ ಆರೋಪ ಅವರ ಕ್ರಿಕೆಟ್ ಬದುಕಿಗೆ ಅತೀ ದೊಡ್ಡ ಕಳಂಕ. ಆ ಕಳಂಕದಿಂದ ಹೊರಬರಲು ಅಜರುದ್ದೀನ್ ಸಾಕಷ್ಟು ಹೋರಾಟ ನಡೆಸಿದ್ದರು. ಬಳಿಕ ರಾಜಕಾರಣಿಯಾಗಿ, ಸಂಸದನಾಗಿ ಈಗ ಹೈದ್ರಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಮಹಮ್ಮದ್ ಅಜರುದ್ದೀನ್ ಅವರು ತಮ್ಮ ಸಾಮಾಜಿ ಜಾಲ ತಾಣದಲ್ಲಿ ಹೈದ್ರಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ತನ್ನ ಸಿಗ್ನೇಚರ್ ಸ್ಟೈಲಿನ ಬ್ಯಾಟಿಂಗ್ ಶೈಲಿಯನ್ನು ನೆನಪು ಮಾಡಿಕೊಂಡಿದ್ದರು. ಇದೀಗ ಅಜರುದ್ದೀನ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅದು ಏನು ಅಂದ್ರೆ, ಮಹಮ್ಮದ್ ಅಜರುದ್ದೀನ್ ಅವರಿಗೆ ಟೀಮ್ ಇಂಡಿಯಾದ ಕೋಚ್ ಆಗುವ ಆಸೆ ಇದೆ ಎಂದು ಹೇಳಿದ್ದಾರೆ.
ಹೌದು… ನಾನು ಟೀಮ್ ಇಂಡಿಯಾದ ಕೋಚ್ ಆಗಲು ಸಿದ್ಧನಿದ್ದೇನೆ. ಆ ಒಂದು ಅವಕಾಶ ಸಿಕ್ಕರೆ ಅದನ್ನು ಸ್ವೀಕರಿಸಲು ರೆಡಿಯಾಗಿದ್ದೇನೆ ಎಂದು ಮಹಮ್ಮದ್ ಅಜರುದ್ದೀನ್ ಹೇಳಿದ್ದಾರೆ. ಮಹಮ್ಮದ್ ಅಜರುದ್ದೀನ್
ನಾಯಕನಾಗಿ 174 ಏಕದಿನ ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದಾರೆ. 1992ರಿಂದ 1999ರವರೆಗೆ ಅವರು ಭಾರತ ತಂಡದ ನಾಯಕನಾಗಿದ್ದರು.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ತಂಡದೊಂದಿಗೆ ಬೆರೆಯುತ್ತಿರುವುದನ್ನು ನೋಡಿದಾಗ ಆಶ್ಚರ್ಯವಾಗುತ್ತಿದೆ. ಉದಾಹರಣೆಗೆ, ನಾನು ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಸ್ಪೇಷಲಿಸ್ಟ್ ಆಗಿದ್ದೇನೆ. ಒಂದು ವೇಳೆ ನಾನು ಯಾವುದೇ ತಂಡದ ಕೋಚ್ ಆದ್ರೆ ಬ್ಯಾಟಿಂಗ್ ತರಬೇತುದಾರನ
ಅಗತ್ಯವಿರುವುದಿಲ್ಲ ಅಲ್ವಾ ಎಂದು ಹೇಳಿಕೊಂಡಿದ್ದಾರೆ.
ಇನ್ನು 2020ರ ಐಪಿಎಲ್ ಟೂರ್ನಿ ನಡೆಯುವುದರ ಬಗ್ಗೆ ಅಜರುದ್ದೀನ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಸಾಕಷ್ಟು ಆಟಗಾರರಿಗೆ ನೆರವಾಗುತ್ತಿದೆ. ಪ್ರತಿ ತಂಡಗಳ 14 ಪಂದ್ಯಗಳ ಬದಲು ಏಳು ಪಂದ್ಯಗಳಿಗೆ ಸೀಮಿತಗೊಳಿಸಿ ಐಪಿಎಲ್ ಟೂರ್ನಿಯನ್ನು ನಡೆಸಬಹುದು. ಯಾಕಂದ್ರೆ ಕಳೆದ 10-12 ವರ್ಷಗಳಿಂದ ಐಪಿಎಲ್ನಿಂದ ಸಾಕಷ್ಟು ಆಟಗಾರರ ಪ್ರತಿಭೆ ಬೆಳಕಿಗೆ ಬಂದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಐಪಿಎಲ್ ಮೂಲಕ ಕೆಲವು ಆಟಗಾರರ ಪ್ರತಿಭೆ ಬೇಗನೇ ಬೆಳಕಿಗೆ ಬಂದಿದೆ. ಇಲ್ಲದೆ ಇದ್ರೆ ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬೂಮ್ರಾನಂತರ ಆಟಗಾರರು ಇನ್ನೂ ದೇಶಿ ಪಂದ್ಯಗಳಲ್ಲಿ ಆಡಬೇಕಾಗಿತ್ತು. ಬಿಸಿಸಿಐ ಮತ್ತು ಕ್ರಿಕೆಟಿಗರಿಗೆ ಐಪಿಎಲ್ ಸಾಕಷ್ಟು ಸಹಾಯ ಮಾಡಿದೆ ಎಂದ ಅವರು, ಐಪಿಎಲ್ ಅಂದ್ರೆ ಕೇವಲ ದುಡ್ಡಿನ ಟೂರ್ನಿ ಎಂಬುದನ್ನು ಅಜರುದ್ದೀನ್ ಅವರು ಒಪ್ಪಿಕೊಳ್ಳಲು ರೆಡಿ ಇಲ್ಲ.
2019ರಲ್ಲಿ ಮಹಮ್ಮದ್ ಅಜರುದ್ದೀನ್ ಅವರು ಹೈದ್ರಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಈ ಬಗ್ಗೆ ಮಾತನಾಡಿದ ಅಜರುದ್ದೀನ್, ಹೌದು, ಇದು ಒಂದು ರೀತಿಯ ಸವಾಲಿನ ಹುದ್ದೆ. ಸಂಸ್ಥೆಯ ಅಡಿಯಲ್ಲಿ 226 ಕ್ಲಬ್ಗಳಿವೆ. ಇಲ್ಲಿ ಆಡಳಿತವನ್ನು ತಟಸ್ಥವಾಗಿ ನಿಂತುಕೊಂಡು ನಡೆಸಬೇಕಾಗಿದೆ. 15 ಸದಸ್ಯರನ್ನೊಳಗೊಂಡ ತಂಡವನ್ನು ಮುನ್ನಡೆಸುವುದಕ್ಕಿಂತ ಇಲ್ಲಿ ಆಡಳಿತ ನಡೆಸುವುದು ಕಷ್ಟ ಎಂದು ಹೇಳಿದ್ದಾರೆ.








