ರಾಜೀನಾಮೆ ಕೊಟ್ಟಾಗ ಸುಧಾಕರ್ ಅವರನ್ನ ಹೊಡೆದಿದ್ದರು : ಬಿ.ಸಿ ಪಾಟೀಲ್
ಮೈಸೂರು : ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಸುಧಾಕರ್ ಅವರನ್ನು ಲಿಫ್ಟ್ ನಲ್ಲಿ ಹಾಕಿಕೊಂಡು ಹೊಡೆದಿದ್ದರು. ಇದರಿಂದಾಗಿಯೇ ನಾವು ಮುಂಬೈಗೆ ಹೋಗಿದ್ದೇವು ಅಂತ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿಯ `ಮುಂಬೈ ಟೀಂ’ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
ನಾವು ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಕರ್ನಾಟಕದಲ್ಲಿ ಭಯಾನಕವಾದ ಪರಿಸ್ಥಿತಿ ಇತ್ತು. ನಾವು ಇಲ್ಲೇ ಇದ್ದರೇ ನಮ್ಮನ್ನ ಹಿಡಿತಾರೆ, ಹೊಡಿತಾರೆ ಅಂತಾ ಮುಂಬೈಗೆ ಹೋಗಿದ್ದೇವು. ನಮ್ಮದು ಬಾಂಬೆ ಟೀಂ ಅಂತ ಇರಲಿಲ್ಲ. ಮಾಧ್ಯಮದವರೇ ನಮಗೆ ಬಾಂಬೆ ಟೀಂ ಅಂತ ಹೆಸರು ಕೊಟ್ಟಿದ್ದು ಎಂದು ವಿವರಿಸಿದರು.
ನಾವು ಮುಂಬೈಗೆ ಹೋಗಲು ಇಲ್ಲಿನ ಭಯಾನಕ ಪತಿಸ್ಥಿತಿ ಕಾರಣವಾಗಿತ್ತು. ನಾವು ನಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ಸುಧಾಕರ್ ಅವರನ್ನು ಲಿಫ್ಟ್ ನಲ್ಲಿ ಹಾಕಿಕೊಂಡು ಹೊಡೆದಿದ್ದರು.
ಆ ಮೇಲೆ ಖರ್ಗೆ ಆಫೀಸ್ ಗೆ ಕರೆದುಕೊಂಡು ಹೋಗಿ ಒಳಗೆ ಹಾಕಿದ್ದರು. ಇದರಿಂದಾಗಿ ನಮಗೆ ಏನಾಗುತ್ತೋ ಎಂಬ ಹೆದರಿಕೆಯಿಂದ ನಾವು ಮುಂಬೈಗೆ ಹೋಗಿದ್ದೇವು ಅಂತ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









