ಸಾಲ ಪಡೆದ ಹಣ ಸಾರ್ಥಕವಾಗಬೇಕು, ಸ್ವಾವಲಂಬಿ ಬದುಕಿಗೆ ಆಧಾರವಾಗಬೇಕು:ಬಿ.ಸಿ.ಪಾಟೀಲ್
ಹಾವೇರಿ : ಸಾಲ ಪಡೆದ ಹಣದಲ್ಲಿ ಸಂಭ್ರಮ ಪಡದೇ ಸಾಲವನ್ನು ಆರ್ಥಿಕಾಭಿವೃದ್ಧಿಗೆ ಬುನಾದಿಯನ್ನಾಗಿಸಿ ಸ್ವಾವಲಂಬಿ ಬದುಕು ಕಂಡುಕೊಂಡಾಗ ಮಾತ್ರ ಸಾಲ ಪಡೆದಿದ್ದು ಹಾಗೂ ಸಾಲ ನೀಡಿದ ಉದ್ದೇಶವು ಈಡೇರಿದಂತಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.
ಕೃಷಿ ಸಚಿವರಾದ ಬಿ.ಸಿ.ಪಾಟೀಲರಿಂದು ಹಿರೇಕೆರೂರು ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಆತ್ಮ ನಿರ್ಭರ್ ನಿಧಿ” ಯಡಿಯಲ್ಲಿ 2019-20 ನೇ ಸಾಲಿನ ಶೇ.5 ರಂತೆ ವಿಶೇಷ ಚೇತನರಿಗೆ “ತ್ರಿಚಕ್ರ ವಾಹನ” ಹಾಗೂ ಸಹಾಯಧನ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಸಾಲಪತ್ರ ಮತ್ತು 2020-21 ನೇ ಸಾಲಿನ ಶೇ.24.10 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಹಾಗೂ 7.25 ರಷ್ಟು ಹಿಂದುಳಿದ ಸಮುದಾಯದ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಿದರು.
ನೀವು ಇದನ್ನೂ ಓದಿ : ಕೊರೊನಾ ವ್ಯಾಕ್ಸಿನ್ ನೀಡಲು ಕರ್ನಾಟಕದಲ್ಲಿ ಅತ್ಯುತ್ತಮ ವ್ಯವಸ್ಥೆ
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವರು, ಸ್ವಾವಲಂಬಿ ಬದುಕಿಗೆ ಆಧಾರವಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ಸಹಾಯಧನ, ಸಾಲ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಿದೆ.
ಕಾರ್ಯಕ್ರಮದಲ್ಲಿಂದು ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಗಿದ್ದು, ಹೆಣ್ಣುಮಕ್ಕಳು ಹೊಲಿಗೆಯಂತ್ರವನ್ನು ಸಾಮೂಹಿಕವಾಗಿ ಪಡೆದಿದ್ದು, ಸಾಮೂಹಿಕವಾಗಿ ಒಗ್ಗಟ್ಟಾಗಿ ಸೇರಿ ಸಣ್ಣಸಣ್ಣ ಗಾರ್ಮೆಂಟ್ಸ್ ನಂತೆ ಮಾಡಿಕೊಂಡರೆ ಅನುಕೂಲವಾಗಲಿದೆ.
ಹೊಲಿಗೆ ಉದ್ಯೋಗ ಕೈಹಿಡಿಯುವ ಉದ್ಯೋಗವಾಗಿದ್ದು, ಬಟ್ಟೆ ಹೊಲಿಗೆಗೆ ಸಾಕಷ್ಟು ಬೇಡಿಕೆಯಿದೆ. ಕಾರ್ಯಕ್ರಮದಲ್ಲಿ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ.ಬಣಕಾರ್ ಸೇರಿದಂತೆ ಪಟ್ಟಣ ಪಂಚಾಯಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








