ADVERTISEMENT
Saturday, March 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

`ಕೈ’ ಕಲಿಗಳಿಗೆ ಬಿ ಫಾರಂ ಹಂಚಿಕೆ; ಕಮಲ, ತೆನೆ ಅಭ್ಯರ್ಥಿ ಫೈನಲ್ ಯಾವಾಗ..?

Kariyappa N by Kariyappa N
October 12, 2020
in Newsbeat, Politics, Samagra karnataka, ರಾಜ್ಯ
kusuma b form
Share on FacebookShare on TwitterShare on WhatsappShare on Telegram

ಬೆಂಗಳೂರು: ಪ್ರತಿಬಾರಿ ಚುನಾವಣೆಗಳು ಬಂದಾಗ ಕೊನೆ ದಿನ ಟಿಕೆಟ್ ಅಂತಿಮಗೊಳಿಸುತ್ತಿದ್ದ ಕಾಂಗ್ರೆಸ್, ಈ ಬಾರಿ ಆರ್.ಆರ್ ನಗರ ಹಾಗೂ ಶಿರಾ ಕ್ಷೇತ್ರಕ್ಕೆ ಮೊದಲೇ ಟಿಕೆಟ್ ಘೋಷಣೆ ಮಾಡಿ ಆಖಾಡಕ್ಕೆ ಇಳಿದಿದೆ.
ಆದರೆ, ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್(candidates bjp jds) ಇನ್ನೂ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿಲ್ಲ. ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳದೇ ಇದ್ದರೂ ಕಮಲ-ತೆನೆ ಕಲಿಗಳು ಬಿರುಸಿನ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಶಿರಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಈಗಾಗಲೇ ಬಿ ಫಾರಂ ವಿತರಿಸಿದ್ದಾರೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿ. ಡಿಕೆ ರವಿ ಪತ್ನಿ ಕುಸುಮಾ ಅವರಿಗೂ ಭಾನುವಾರ ಡಿ.ಕೆ ಶಿವಕುಮಾರ್ ಬಿ ಫಾರಂ ನೀಡಿದ್ದಾರೆ. ನಾಮಪತ್ರ ಸಲ್ಲಿಕೆಗೂ ಕಾಂಗ್ರೆಸ್ ಮುಹೂರ್ತ ನಿಗಧಿ ಮಾಡಿದೆ.


ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಉಪಚುನಾವಣಾ ಅಖಾಡದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದರೆ, ಆಡಳಿತಾರೂಡ ಬಿಜೆಪಿ ಎರಡೂ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಅಂತಿಮ ಮಾಡದೆ ಅಡಕತ್ತರಿಯಲ್ಲಿ ಸಿಲುಕಿದೆ.
ಆರ್.ಆರ್ ನಗರ ಕ್ಷೇತ್ರಕ್ಕೆ ಈ ಹಿಂದೆ ಕಾಂಗ್ರೆಸ್‍ನಿಂದ ಗೆದ್ದು ಬಿಜೆಪಿ ಸೇರಿರುವ ಮುನಿರತ್ನ ತಮಗೇ ಟಿಕೆಟ್ ಬೇಕೆಂದು ಹಠ ಹಿಡಿದು ಕುಳಿತಿದ್ದಾರೆ. ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸೇರಿರುವ ಸುಧಾಕರ್ ಸೇರಿದಂತೆ ಬಹುತೇಕ ನಾಯಕರು ಮುನಿರತ್ನ ಅವರಿಗೆ ಟಿಕೆಟ್ ನೀಡಬೇಕೆಂದು ಸಿಎಂ ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದ್ದಾರೆ.

Related posts

ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ

ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ

March 28, 2026
115 ರೂಪಾಯಿ ಪೊಂಗಲ್ ತರಿಸಲು 273 ರೂಪಾಯಿ ಪಾವತಿ: ಸ್ವಿಗ್ಗಿ ದರದ ವಿರುದ್ಧ ಸುಮಲತಾ ಅಂಬರೀಶ್ ಕೆಂಡಾಮಂಡಲ

115 ರೂಪಾಯಿ ಪೊಂಗಲ್ ತರಿಸಲು 273 ರೂಪಾಯಿ ಪಾವತಿ: ಸ್ವಿಗ್ಗಿ ದರದ ವಿರುದ್ಧ ಸುಮಲತಾ ಅಂಬರೀಶ್ ಕೆಂಡಾಮಂಡಲ

March 28, 2026


ಮತ್ತೊಂದೆಡೆ, ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಮುನಿರತ್ನ ವಿರುದ್ಧ ಸೋತಿರುವ ತುಳಸಿ ಮುನಿರಾಜು ಕೂಡ ತಮಗೇ ಟಿಕೆಟ್ ಬೇಕೆಂದು ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಬಿಜೆಪಿ ಕೋರ್ ಕಮಿಟಿ ಕೂಡ ಇಬ್ಬರ ಹೆಸರು ಶಿಫಾರಸು ಮಾಡಿ ಕೈತೊಳೆದುಕೊಂಡಿದೆ.
ಇನ್ನು ಶಿರಾ ಕ್ಷೇತ್ರಕ್ಕೆ ಬರುವುದಾದರೆ ಅಲ್ಲಿ ಮೂವರು ಆಕಾಂಕ್ಷಿಗಳು ಬಿಜೆಪಿ ಟಿಕೆಟ್‍ಗಾಗಿ ಪೈಪೋಟಿ ನಡೆಸಿದ್ದಾರೆ. ಹೀಗಾಗಿ ಶಿರಾ ಕ್ಷೇತ್ರದತ್ತ ಯಾವ ಬಿಜೆಪಿ ನಾಯಕರೂ ಇನ್ನೂ ತಲೆ ಹಾಕಿಲ್ಲ.
ಇನ್ನೂ, ಜೆಡಿಎಸ್ ಸ್ಥಿತಿ ವಿಭಿನ್ನ. ಹಾಗೂ ಹೀಗೂ ಶಿರಾ ಕ್ಷೇತ್ರಕ್ಕೆ ಮಾಜಿ ಶಾಸಕ ದಿ. ಬಿ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮಗೆ ಟಿಕೆಟ್ ಘೋಷಿಸಿದ್ದು, ಪ್ರಚಾರ ಕಾರ್ಯವನ್ನೂ ಆರಂಭಿಸಿದೆ. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಶಿರಾ ಅಖಾಡದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಆದರೆ, ಆರ್.ಆರ್ ನಗರ ಕ್ಷೇತ್ರಕ್ಕೆ ಟಿಕೆಟ್ ಹಂಚಿಕೆ ಗೊಂದಲ ಜೆಡಿಎಸ್‍ನಲ್ಲಿ ಇನ್ನೂ ಬಗೆಹರಿದಿಲ್ಲ. ಹೆಚ್.ಡಿ ದೇವೇಗೌಡರು ತೆನೆ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಆದರೆ, ಆರ್.ಆರ್ ನಗರಕ್ಕೆ ಅಭ್ಯರ್ಥಿ ಯಾರೂ ಎನ್ನುವುದನ್ನು ಇನ್ನೂ ಅಂತಿಮಗೊಳಿಸಿಲ್ಲ.
ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್‍ಗೆ (candidates bjp jds) ಆರ್.ಆರ್ ನಗರ ಕ್ಷೇತ್ರಕ್ಕೆ ಟಿಕೆಟ್ ಹಂಚಿಕೆಯೇ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಇಂದು ಎರಡೂ ಪಕ್ಷಗಳು ಉಪಚುನಾವಣಾ ಕಲಿಗಳ ಹೆಸರನ್ನು ಅಂತಿಮಗೊಳಿಸುತ್ತವಾ ಎಂಬುದನ್ನು ಕಾದು ನೋಡಬೇಕಿದೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: b formbjp jdsby electioncandidatesCongressRR NagarSira
ShareTweetSendShare
Join us on:

Related Posts

ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ

ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ

by Shwetha
March 28, 2026
0

ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡುವ ಮೂಲಕ ದೇಶದ ಜನತೆಗೆ ತುಸು ನೆಮ್ಮದಿ ನೀಡಿದೆ. ಕೇಂದ್ರದ ಈ ನಡೆ...

115 ರೂಪಾಯಿ ಪೊಂಗಲ್ ತರಿಸಲು 273 ರೂಪಾಯಿ ಪಾವತಿ: ಸ್ವಿಗ್ಗಿ ದರದ ವಿರುದ್ಧ ಸುಮಲತಾ ಅಂಬರೀಶ್ ಕೆಂಡಾಮಂಡಲ

115 ರೂಪಾಯಿ ಪೊಂಗಲ್ ತರಿಸಲು 273 ರೂಪಾಯಿ ಪಾವತಿ: ಸ್ವಿಗ್ಗಿ ದರದ ವಿರುದ್ಧ ಸುಮಲತಾ ಅಂಬರೀಶ್ ಕೆಂಡಾಮಂಡಲ

by Shwetha
March 28, 2026
0

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳು ಜನರ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ ಈ ಆ್ಯಪ್‌ಗಳು ವಿಧಿಸುವ ಅತಿಯಾದ ಸೇವಾ ಶುಲ್ಕ ಮತ್ತು ಡೆಲಿವರಿ...

ದೇಶದಲ್ಲಿ ಲಾಕ್‌ಡೌನ್ ಇಲ್ಲ.. ಕೇಂದ್ರದ ಸ್ಪಷ್ಟನೆ

ದೇಶದಲ್ಲಿ ಲಾಕ್‌ಡೌನ್ ಇಲ್ಲ.. ಕೇಂದ್ರದ ಸ್ಪಷ್ಟನೆ

by Shwetha
March 28, 2026
0

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ದೇಶದಲ್ಲಿ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆ, ಲಾಕ್‌ಡೌನ್ ಅನಿವಾರ್ಯ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಈ ಸುದ್ದಿಗಳನ್ನು ಸಚಿವ ಹರ್ದೀಪ್ ಸಿಂಗ್ ಪುರಿ ತಳ್ಳಿ...

1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ; ಎಲ್ಲ ಶಾಲೆಗಳಿಗೆ ಅನ್ವಯ

1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ; ಎಲ್ಲ ಶಾಲೆಗಳಿಗೆ ಅನ್ವಯ

by Shwetha
March 28, 2026
0

ರಾಜ್ಯ ಸರ್ಕಾರ 2026-27ನೇ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿ ಪ್ರವೇಶದ ವಯೋಮಿತಿಯನ್ನು 60 ದಿನಗಳವರೆಗೆ ಸಡಿಲಗೊಳಿಸಿದೆ. ಇದುವರೆಗೆ ಜೂನ್ 1ರೊಳಗೆ ಮಗುವಿಗೆ 6 ವರ್ಷ ವಯಸ್ಸು ಪೂರ್ಣವಾಗಿರಬೇಕು...

ದಾವಣಗೆರೆ ಉಪ ಚುನಾವಣೆ CM ಸಂಧಾನ ಅಸ್ತ್ರ ಯಶಸ್ವಿ : ಬಂಡಾಯ ಶಮನ, ಕೈ ಪಾಳಯದಲ್ಲಿ ಮಂದಹಾಸ; ಕಣದಿಂದ ಹಿಂದೆ ಸರಿದ ಸಾದಿಕ್ ಪೈಲ್ವಾನ್

ದಾವಣಗೆರೆ ಉಪ ಚುನಾವಣೆ CM ಸಂಧಾನ ಅಸ್ತ್ರ ಯಶಸ್ವಿ : ಬಂಡಾಯ ಶಮನ, ಕೈ ಪಾಳಯದಲ್ಲಿ ಮಂದಹಾಸ; ಕಣದಿಂದ ಹಿಂದೆ ಸರಿದ ಸಾದಿಕ್ ಪೈಲ್ವಾನ್

by Shwetha
March 28, 2026
0

ಬೆಂಗಳೂರು: ದಾವಣಗೆರೆ ಉಪಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಪಾಳಯದಲ್ಲಿ ಎದುರಾಗಿದ್ದ ಬಂಡಾಯದ ಭೀತಿ ಇದೀಗ ಸಂಪೂರ್ಣವಾಗಿ ತಿಳಿಯಾಗಿದೆ. ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram