B.K.Hariprasad | ಬಜೆಟ್ ನಲ್ಲಿ ಶೋಷಿತ ವರ್ಗಗಳ ಕಡೆಗಣನೆ
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್ ನಲ್ಲಿ ಶೋಷಿತ ವರ್ಗಗಳನ್ನು ಕಡೆಗಣಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಬಜೆಟ್ ಮೇಲೆ ಚರ್ಚೆ ಆರಂಭಿಸಿದ ಅವರು, ಪ್ರಚಾರಕ್ಕಾಗಿ ಹಲವು ಯೋಜನೆಗಳನ್ನು ಘೋಷಣೆ ಮಾಡಿ, ಅನುಷ್ಠಾನಕ್ಕೆ ತರದೆ ಕೈ ಬಿಡಲಾಗುತ್ತಿದೆ. ಹಿಂದಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ ಎಂದು ಹೇಳಿದರು.
ವಿಪ್ರೋ, ಇನ್ಫೋಸಿಸ್, ಟಾಟಾ ಕಂಪೆನಿಗಳು ದೇಶದ ಆಸ್ತಿ ಅವುಗಳ ಕೊಡುಗೆ ಅಪಾರ, ಆದರೆ ಅವುಗಳ ಮುಖ್ಯಸ್ಥರನ್ನು ರಾಜಕೀಯ ಕಾರಣಕ್ಕೆ ಟೀಕಿಸಲಾಗಿದೆ.
ದಾನ ಧರ್ಮದಲ್ಲಿ ಎತ್ತಿದ ಕೈ ಆಗಿರುವ ಅಜೀಂ ಪ್ರೇಮ್ ಜೀ ಅವರ ಹೆಸರನ್ನೇ ಹೇಳುವುದಿಲ್ಲ. ರತನ್ ಟಾಟಾ ಸೇರಿದಂತೆ ಹಲವರನ್ನು ಎಂದು ಟೀಕಿಸಲಾಗುತ್ತಿದೆ ಎಂದು ಹರಿಪ್ರಸಾದ್ ಬೇಸರ ಹೊರಹಾಕಿದರು.
b-k-hariprasad-karnataka budget basavaraja bommai









