B.K.Hariprasad | ಕಾಂಗ್ರೆಸ್ ಮಟಾಶ್ ಎಂದ ರಾಮುಲುಗೆ ಹರಿಪ್ರಸಾದ್ ಟಾಂಗ್
ಚಿತ್ರದುರ್ಗ : ಸಚಿವ ಶ್ರೀ ರಾಮುಲು ಅವರು “ ರಾಹುಲ್ ಗಾಂಧಿ ಪಾದಯಾತ್ರೆ ಸ್ಥಳಗಳಲ್ಲಿ ಕಾಂಗ್ರೆಸ್ ಮಟಾಶ್ ಎಂಬ ಹೇಳಿಕೆಗೆ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಕೋನಸಾಗರ ಗ್ರಾಮದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಶ್ರೀರಾಮುಲು ಜೊತೆ ಇದ್ದವರು ನಾಲ್ಕೈದು ವರ್ಷ ಜೈಲಿಗೆ ಹೋಗಿದ್ದಾರೆ.
ಸರ್ಕಾರದ ಅವಧಿ ಮುಗಿದ ಬಳಿಕ ಯಾರು ಜೈಲಿಗೆ ಹೋಗುತ್ತಾರೆ ನೋಡೋಣಾ ಎಂದಿದ್ದಾರೆ.
ಇನ್ನು ಚುನಾವಣೆ ವರ್ಷದಲ್ಲಿ ಮೋಹನ್ ಭಾಗವತ್ ಬಿಹಾರದಲ್ಲಿ ಮೀಸಲಾತಿ ರದ್ದು ಮಾಡಿ ಎಂದಿದ್ದರು. ಸೂತ್ರದಾರ ಭಾಗವತ್ ಅವರಿಗೆ ಹೋಗಿ ಕೇಳೋಕೆ ಹೇಳಿ.

ಯಡಿಯೂರಪ್ಪ ಅವರಿಗೆ ಜೈಲಿಗೆ ಹೋಗುವ ಭಯವಿದೆ. ಅವರ ವಿರುದ್ಧದ ಕೇಸ್ ಗಳನ್ನ ಸಂಪೂರ್ಣ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಹೀಗಾಗಿ ಇದನ್ನೆಲ್ಲಾ ಅನಿವಾರ್ಯವಾಗಿ ಹೇಳಬೇಕಿದೆ.
75 ವರ್ಷದ ಬಳಿಕ ಇದೀಗ ಮಾರ್ಗದರ್ಶಕ ಮಂಡಲಕ್ಕೆ ಕಳಿಸಿದ್ದಾರೆ. ಯಡಿಯೂರಪ್ಪ ಬುದ್ದಿ ಭ್ರಮಣೆಯಿಂದ ಹೀಗೆ ಮಾತನಾಡುತ್ತಿದ್ದಾರೆ. ಮೋದಿ 56 ಇಂಚು ಲೀಡರ್ ಒಂದು ಪ್ರೆಸ್ ಮೀಟ್ ಮಾಡಿಲ್ಲ.
ರಾಷ್ಟ್ರ ಜರ್ನಲಿಸ್ಟ್ ಗಳ ಪತ್ರಿಕಾ ಗೋಷ್ಠಿ ಮಾಡಿಲ್ಲ, ಅವರಿಗೆ ಉತ್ತರ ನೀಡಲು ಆಗಿಲ್ಲ. ಸರ್ಕಾರ ಮುಗಿಯುವ ಒಳಗೆ 40% ಭ್ರಷ್ಟಾಚಾರದಲ್ಲಿ ಯಾರ್ಯಾರು ಜೈಲಿಗೆ ಹೋಗ್ತಾರೋ ನೋಡೋಣಾ ಎಂದು ಹೇಳಿದ್ದಾರೆ.







