b-k-sangameshwara | ಇಸ್ಪೀಟ್ ಆಟದಲ್ಲಾದ ಗಲಾಟೆಗೆ ಕೋಮು ಬಣ್ಣ
ಭದ್ರಾವತಿ : ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ವರ್, ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಕೋಮು ಗಲಭೆ ಸೃಷ್ಟಿಸಲು ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಮಂಗಳವಾರ ಸುನೀಲ್ ಕುಮಾರ್ ಎಂಬುವನನ್ನ ಮುಸ್ಲಿಂ ಯುವಕ ಥಳಿಸಿದ್ದು ನಿಜವೇ ಆದರೂ ಸಹ ಅದು ಧರ್ಮದ ಕಾರಣಕ್ಕಲ್ಲ, ಬದಲಿಗೆ ಇಸ್ಪೀಟ್ ಆಟವಾಡುವ ಸಂದರ್ಭದಲ್ಲಿ ಆದ ಕಿರಿಕ್, ಇದನ್ನ ಕೋಮು ಗಲಭೆ ಎಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸಿದೆ ಎಂದು ಬಿ.ಕೆ.ಸಂಗಮೇಶ್ವರ್ ದೂರಿದ್ದಾರೆ.

ಭದ್ರಾವತಿದಲ್ಲಿ ಶಾಸಕ ಬಿಕೆ ಸಂಗಮೇಶ್ವರ್ ಮಾತನಾಡಿ, ಸುನೀಲ್ ಕುಮಾರ್, ಮುಬಾರಕ್ ಇಬ್ಬರೂ ಸ್ನೇಹಿತರು. ಇಸ್ಪೀಟ್ ಆಡೋ ವಿಚಾರದಲ್ಲಿ ಅವರಿಗೆ ಮನಸ್ಥಾಪವಾಗಿತ್ತು. ಈ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸುನೀಲನಿಗೆ ಮುಬಾರಕ್ ಹೊಡೆದಿದ್ದಾನೆ ಎಂದರು.
ಗಲಾಟೆಯಲ್ಲಿ ಮೂಗಿನಲ್ಲಿ ಸ್ವಲ್ಪ ರಕ್ತ ಬಂದಿದ್ದು ಬಿಟ್ಟರೆ ಬೇರೇನೋ ಆಗಿಲ್ಲ. ಆದರೆ ಇದನ್ನ ಕೋಮು ಗಲಭೆ ಎಂದು ಬಿಂಬಿಸಲು, ಬಿಜೆಪಿ ಹಾಗೂ ಭಜರಂಗದಳವರು ಪ್ರಯತ್ನ ಮಾಡುತ್ತಿದ್ದಾರೆ.
ಅವರ ಆಟ ಭದ್ರಾವತಿಯಲ್ಲಿ ನಡೆಯಲ್ಲ. ನಮ್ಮ ಕ್ಷೇತ್ರದಲ್ಲಿ ಎಲ್ಲರೂ ಒಂದು ತಾಯಿ ಮಕ್ಕಳಂತೆ ಇದ್ದೇವೆ. ಬಿಜೆಪಿಗೆ ಅಭಿವೃದ್ಧಿ ಕೆಲಸಗಳನ್ನ ಮಾಡಲಾಗುತ್ತಿಲ್ಲ. ಹಾಗಾಗಿ ಅವರು ಧರ್ಮದ ಹೆಸರಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.








