B S Yeddyurappa | ಮೋದಿ ಬಂದು ಹೋದ ಮೇಲೆ ಉತ್ಸಾಹ ಬಂದಿದೆ
ಶಿವಮೊಗ್ಗ : ಮೋದಿ ಬಂದು ಹೋದ ಮೇಲೆ ಉತ್ಸಾಹ ಬಂದಿದೆ, ಪ್ರಧಾನಿ ಮೋದಿ ಶಿವಮೊಗ್ಗಕ್ಕೂ ಕರೆಸುವ ಪ್ರಯತ್ನ ಆದಷ್ಟು ಬೇಗ ಆಗುತ್ತೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ಬಿಜೆಪಿ ರಾಷ್ಟ್ರೀಯ ಚುನಾವಣಾ ಮಂಡಳಿಗೆ ಸೇರಿಸಿದ್ದಕ್ಕೆ ಅಭಿನಂದನೆ, ಹೊಣೆಗಾರಿಕೆ ಗೌರವಯುತವಾಗಿ ನಿರ್ವಹಿಸುತ್ತೇನೆ.
ರಾಜ್ಯದಲ್ಲಿ 140 ಸೀಟ್ ಗೆದ್ದು ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇನೆ. ಸಭೆಯಲ್ಲಿಯೂ ಸಹ ಪ್ರಧಾನಿ ಕರೆ ಕೊಟ್ಟಿದ್ದಾರೆ,

ರಾಜ್ಯಕ್ಕೆ ಆಹ್ವಾನ ನೀಡಿದಾಗ ಬರುತ್ತೇನೆ ಎಂದು ಮೋದಿ ಹೇಳಿದ್ದಾರೆ, ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಿ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದರು.
ಪ್ರಧಾನಿ ಮೋದಿ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದರು, ಬಿಜೆಪಿಯನ್ನ ಅಧಿಕಾರಕ್ಕೆ ತರಲೇ ಬೇಕು ಎಂದು ಹೇಳಿದ್ದಾರೆ, ನಾವು ಸಹ ಪ್ರಧಾನಿ ಮೋದಿಗೆ ಭರವಸೆ ನೀಡಿದ್ದೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಮುದ್ದಹನುಮೇಗೌಡ ಕಾಂಗ್ರೆಸ್ ಬಿಟ್ಡಿದ್ದಾರೆ, ಬಿಜೆಪಿಗೆ ಬರುತ್ತೇನೆಂದು ನನ್ನ ಭೇಟಿ ಮಾಡಿ ಹೇಳಿದ್ದಾರೆ, ಅನೇಖ ಜನ ಮುಖಂಡರು ಬಿಜೆಪಿಗೆ ಬರುತ್ತಿದ್ದಾರೆ, ಕಾರ್ಯಕ್ರಮ ಮಾಡಿ ಬಿಜೆಪಿಗೆ ಎಲ್ಲರನ್ನೂ ಸೇರಿಸಿಕೊಳ್ತೀವಿ ಎಂದು ತಿಳಿಸಿದ್ದಾರೆ.








