ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಮುಂದಿನ ವಿಚಾರಣೆ ತನಕ ಯಡಿಯೂರಪ್ಪ ವಿರುದ್ಧ ಒತ್ತಾಯದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸಿಐಡಿಗೆ ಹೈಕೋರ್ಟ್ ಸೂಚಿಸಿದೆ. ಯಾವುದೇ ಒತ್ತಾಯದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸೂಚಿಸಿರುವ ಕೋರ್ಟ್, ಜೂನ್ 17 ರಂದು ಯಡಿಯೂರಪ್ಪ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ.
ಜೂ. 17ರಂದು ಹಾಜರಾಗುವುದಾಗಿ ಬಿ.ಎಸ್ ಯಡಿಯೂರಪ್ಪ ಉತ್ತರಿಸಿದ್ದಾರೆ. ಅವರಿಗೆ ವಯಸ್ಸಾಗಿದ್ದು ಸಹಜವಾಗಿಯೇ ಅನಾರೋಗ್ಯ ಸಮಸ್ಯೆಗಳಿರುತ್ತವೆ. ಹೀಗಾಗಿ ಬಂಧಿಸಿ ತನಿಖೆಗೊಳಪಡಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪೊಲೀಸರು ಸಲ್ಲಿಸಿದ್ದ ಅರ್ಜಿ ಮನ್ನಿಸಿದ ಕೋರ್ಟ್ ಯಡಿಯೂರಪ್ಪಗೆ ಬಂಧನದ ವಾರೆಂಟ್ ಜಾರಿಗೊಳಿಸಿತ್ತು. ಕೇಸ್ ರದ್ದು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾ.ಕೃಷ್ಣ ಎಸ್ ದೀಕ್ಷಿತ್ರವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಿತು. ಏ.12ರಂದು ಬಿಎಸ್ವೈ ವಿಚಾರಣೆಗೆ ಹಾಜರಾಗಿದ್ದರು. 2ನೇ ನೋಟಿಸ್ ಗೆ ಹಾಜರಾಗಿರಲಿಲ್ಲ. ಜೂ.17ರಂದು ಹಾಜರಾಗುವುದಾಗಿ ಬಿಎಸ್ವೈ ಉತ್ತರಿಸಿದ್ದಾರೆ. ಹೀಗಾಗಿ ಬಂಧಿಸಿ ತನಿಖೆಗೊಳಪಡಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಎಫ್ಐಆರ್ ನಂತರ ತನಿಖೆ ಯಾವಾಗ ಆರಂಭವಾಯಿತು ಎಂದು ಹೈಕೋರ್ಟ್ ಪ್ರಶ್ನಿಸಿದ್ದು, ಮಾರ್ಚ್ 14ರ ಎಫ್ಐಆರ್ ನಂತರ ಏ.12ರಂದು ನೋಟಿಸ್ ನೀಡಿದ್ದಾರೆ. ಅಲ್ಲಿಯವರೆಗೆ ಪೊಲೀಸರು ಏನು ಮಾಡಿದರೆಂಬುದು ತಿಳಿದಿಲ್ಲ ಎಂದು ಸಿ.ವಿ.ನಾಗೇಶ್ ವಾದ ಮಂಡಿಸಿದರು.
ಆಗ ಬಿಎಸ್ವೈ ಬಂಧನ ಏಕೆ ಬೇಕಾಗಿದೆ ಎಂದು ಹೈಕೋರ್ಟ್ ಮರು ಪ್ರಶ್ನಿಸಿದ್ದು, ಜೂನ್ 12ರಂದು ಹಾಜರಾಗುವಂತೆ ಬಿಎಸ್ವೈಗೆ ನೋಟಿಸ್ ನೀಡಲಾಗಿತ್ತು. ಮೊಬೈಲ್ನಲ್ಲಿದ್ದ ವಿಡಿಯೋ, ಧ್ವನಿ ಪರೀಕ್ಷೆ ನಂತರ ನೋಟಿಸ್ ನೀಡಲಾಯಿತು. ಹಾಜರಾಗದ ಕಾರಣಕ್ಕೆ ಬಂಧನದ ವಾರಂಟ್ ಪಡೆಯಲಾಗಿದೆ. ಮೇ 13ರಂದು ಎಫ್ಎಸ್ಎಲ್ ವರದಿ ಬಂದಿದೆ. ಸುಟ್ಟ ಮೊಬೈಲ್ ಚಿಪ್ ನಲ್ಲಿದ್ದ ಡಾಟಾ ತೆಗೆಯಲು ಗುಜರಾತ್ FSLಗೆ ಕಳುಹಿಸಲಾಯಿತು. ಅದಾದ ನಂತರ ಧ್ವನಿ ಪರೀಕ್ಷೆಗೆ ಬೆಂಗಳೂರು ಎಫ್ ಎಸ್ ಎಲ್ ಗೆ ಕಳುಹಿಸಲಾಯಿತು ಎಂದು ಎಡಿಜಿಪಿ ಬಿ.ಕೆ.ಸಿಂಗ್ ಹೇಳಿದ್ದಾರೆ. ವಾದ- ಪ್ರತಿವಾದ ಆಲಿಸಿದ ಕೋರ್ಟ್ ಈ ರೀತಿ ಸೂಚಿಸಿದೆ.