ಬೆಂಗಳೂರು : ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ, ಹೋರಾಟದಿಂದಲೇ ರಾಜಕಾರಣದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಧೀಮಂತ ನಾಯಕ. ದಕ್ಷಿಣ ಭಾರತದಲ್ಲಿ ಬಿಜೆಪಿಯ ಶಕೆಯನ್ನು ಆರಂಭಿಸಿದ ರಾಜಾಹುಲಿ. ರಾಜ್ಯ ಬಿಜೆಪಿಯ ಮಾಸ್ ಲೀಡರ್, ಒನ್ ಅಂಡ್ ಓನ್ಲಿ ಯಡಿಯೂರಪ್ಪ. ಕರ್ನಾಟಕ ಬಿಜೆಪಿಯ ದೊರೆಯಾಗಿದ್ದರೂ ಬಿಎಸ್ ವೈರ ಆ ಒಂದು ಕನಸು ಮಾತ್ರ ಈಡೇರಿಲ್ಲ.
ಏನ್ ಆ ಕನಸು..?
ಯಡಿಯೂರಪ್ಪ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಒಂದು ಬಾರಿಯೂ ಸಂಪೂರ್ಣ ಬಹುಮತದಿಂದ ಸರ್ಕಾರ ರಚನೆ ಮಾಡಿಲ್ಲ. ಹೀಗಾಗಿ ಒಂದು ಬಾರಿಯಾದರೂ 150ಕ್ಕೂ ಹೆಚ್ಚು ಸೀಟ್ ಗಳನ್ನು ಗೆದ್ದು ಪೂರ್ಣ ಬಹುಮತದಿಂದ ಬಿಜೆಪಿ ರಾಜ್ಯದ ಗದ್ದುಗೆ ಹಿಡಿಯಬೇಕೆಂಬುದು ರಾಜಾಹುಲಿಯ ಕನಸು. ‘
ತಂದೆಯ ಕನಸು ಹೊತ್ತ ಪುತ್ರ
ಸದ್ಯದ ಪರಿಸ್ಥಿತಿ ನೋಡಿದರೇ ಬಿಎಸ್ ಯಡಿಯೂರಪ್ಪ ಮುಂದಿನ ದಿನಗಳಲ್ಲಿ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವ ಯಾವುದೇ ಲಕ್ಷಣಗಳಿಲ್ಲ. ಹೀಗಾಗಿ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ತಂದೆಯ ಕನಸು ಈಡೇರಿಕೆಗೆ ಪಣ ತೊಟ್ಟಿದ್ದಾರೆ.
ಹೌದು..! ಸುದ್ದಿ ಸಂಸ್ಥೆಯೊಂದಿಗೆ ವಿಜಯೇಂದ್ರ ಮಾತನಾಡುತ್ತ, ಕಳೆದ ಚುನಾವಣೆಯಲ್ಲಿ ನಮಗೆ 104 ಸೀಟ್ ಬಂತು.ಮುಂದಿನ ಚುನಾವಣೆಯಲ್ಲಿ 150ಕ್ಕೂ ಅಧಿಕ ಸೀಟು ಗೆಲ್ಲಬೇಕೆಂಬ ಕನಸು ಯಡಿಯೂರಪ್ಪನವರದ್ದು. ಹೀಗಾಗಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.








