ಬಿಎಸ್ ವೈ ಮಾಡಿದ ಅಕ್ರಮ ಇನ್ಯಾವ ರಾಜಕಾರಣಿಯೂ ಮಾಡಿಲ್ಲ : ವಾಟಾಳ್
ವಿಧಾನಸಭೆ ಪರಿಷತ್ ಸದಸ್ಯರ ನಡೆ ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಗಳೂರು ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ನಾಯಿಗಳ ಮೆರವಣಿಗೆ ಮಾಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಿದ್ದೇ ಅಕ್ರಮವಾಗಿದೆ.
ಅಧಿಕಾರಕ್ಕೆ ಬರಲು ಯಡಿಯೂರಪ್ಪ ಮಾಡಿದ ಅಕ್ರಮ ಇನ್ಯಾವ ರಾಜಕಾರಣಿಯೂ ಮಾಡಿಲ್ಲ. ತಮ್ಮ ತಪ್ಪಿಗೆ ಸಿಎಂ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಸ್ಪೀಕರ್ ಪೀಠವನ್ನು ದುರುಪಯೋಗ ಮಾಡಿಕೊಂಡು ವಿಧಾನಪರಿಷತ್ ಗೆ ಕೈ ಹಾಕಿದ್ದಾರೆ. ಹಳೆ ಸ್ನೇಹಿತರು ಕುಮಾರಸ್ವಾಮಿ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ನೀವು ಇದನ್ನೂ ಓದಿ : ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಶರತ್ ಬಚ್ಚೇಗೌಡ ಭೇಟಿ
ನಾನು ಸುಮಾರು 1967 ರಿಂದ ರಾಜಕಾರಣದಲ್ಲಿದ್ದೇನೆ. ಒಂದು ಬಾರಿ ಸ್ಪೀಕರ್ ಸದನವನ್ನ ಅನಿರ್ಧಿಷ್ಠ ಕಾಲದವರೆಗೆ ಸಭಾಪತಿಗಳು ಮುಂದೂಡಿದ ಮೇಲೆ, ನೀವು ಯಾವ ಆಧಾರದ ಮೇಲೆ ಪರಿಷತ್ ಕರೆದ್ರಿ ಎಂದು ಪ್ರಶ್ನಿಸಿದ ವಾಟಾಳ್ ನಾಗರಾಜ್,
ವಿಧಾನ ಪರಿಷತ್ ಅನ್ನ ದುರುಪಯೋಗ ಮಾಡಿಕೊಂಡಿರುವವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









