ನನ್ನನ್ನು ಬೆಳಸಿರೋದು ಯಡಿಯೂರಪ್ಪನವರು : ಅರಗ ಜ್ಞಾನೇಂದ್ರ
ಶಿವಮೊಗ್ಗ : ನನ್ನನ್ನು ಬೆಳಸಿರೋದು ಯಡಿಯೂರಪ್ಪನವರು. 1983 ರಿಂದ ಅವರ ಜೊತೆಗೆ ಚುನಾವಣೆ ಎದುರಿಸಿದ್ದೇನೆ. ಸೋಲು, ಗೆಲುವು ಎರಡನ್ನು ನೋಡಿದ್ದೇನೆ ಎಂದು ಗೃಹ ಮಂತ್ರಿ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರಗ ಜ್ಞಾನೇಂದ್ರ, ಯಾವ ಸಂಸದರು ಮಾಡದ ಕೆಲಸವನ್ನು ರಾಘವೇಂದ್ರ ಮಾಡಿದ್ದಾರೆ.
ರಾಜ್ಯ ಮತ್ತು ಕೇಂದ್ರದ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಇವತ್ತು ಅವರ ಜನ್ಮ ದಿನಕ್ಕೆ ಬಂದಿರೋದಕ್ಕೆ ತುಂಬಾ ಸಂತೋಷವಾಗುತ್ತಿದೆ.
ಇಷ್ಟು ದಿನ ಶಾಸಕನಾಗಿ ಬರುತ್ತಿದ್ದೆ, ಯಡಿಯೂರಪ್ಪನವರ ಆಶಿರ್ವಾದದಿಂದ ಬೊಮ್ಮಾಯಿ ಮತ್ತು ಪಕ್ಷ ಹಿರಿಯರ ಬೆಂಬಲದಿಂದ ಗೃಹ ಖಾತೆಯಂತಹ ದೊಡ್ಡ ಖಾತೆ ನನಗೆ ಸಿಕ್ಕಿದೆ.
ನನಗೆ ಶಿಕಾರಿಪುರಕ್ಕೆ ಬರೋದಕ್ಕೆ ಆನಂದವಾಗತ್ತೆ. ನನ್ನನ್ನು ಬೆಳಸಿರೋದು ಯಡಿಯೂರಪ್ಪನವರು. 1983 ರಿಂದ ಅವರ ಜೊತೆಗೆ ಚುನಾವಣೆ ಎದುರಿಸಿದ್ದೇನೆ.
ಸೋಲು, ಗೆಲುವು ಎರಡನ್ನು ನೋಡಿದ್ದೇನೆ. ನಮ್ಮಂತ ಹಿರಿಯರಿಗೆ ಸ್ಥಾನಮಾನ ಸಿಕ್ಕಿದೆ ಅನ್ನುವುದಕ್ಕಿಂದ ನಮ್ಮ ಪಕ್ಷ ಆ ಮಟ್ಟಕ್ಕೆ ಹೋಗಿದೆ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಮಾದಕ ವಸ್ತುಗಳನ್ನು ಮಟ್ಟ ಹಾಕಬೇಕು ಅಂತ ಮೊದಲ ಸಭೆಯಿಂದಲು ಸಹ ಸೂಚನೆ ಕೊಟ್ಟಿದ್ದೇನೆ.
ಶಿವಮೊಗ್ಗ ಅಷ್ಟೇ ಅಲ್ಲ ಬೆಂಗಳೂರು ಮಂಗಳೂರು ಸೇರಿದಂತೆ ಎಲ್ಲಾ ಕಡೆಗಳಲ್ಲಿಯು ಮಾದಕ ವಸ್ತುಗಳ ಮಾರಾಟ ಇದೆ.
ಇತ್ತೀಚಿನ ದಿನಗಳಲ್ಲಿ ಹತ್ತಕ್ಕೂ ಟನ್ ಗೂ ಅಧಿಕ ಪ್ರಮಾಣದ ಮಾದಕ ವಸ್ತುಗಳನ್ನು ಪೆÇಲೀಸರು ಸೀಜ್ ಮಾಡಿದ್ದಾರೆ ಎಂದು ತಿಳಿಸಿದರು.