ಯಡಿಯೂರಪ್ಪ ಇದ್ರೆ ಮಾತ್ರ ಬಿಜೆಪಿ, ಇಲ್ಲಾಂದ್ರೆ ಸರ್ವನಾಶ : ದಿಂಗಾಲೇಶ್ವರ ಶ್ರೀ
ಬೆಂಗಳೂರು : ಯಡಿಯೂರಪ್ಪ ಇದ್ರೆ ಮಾತ್ರ ಬಿಜೆಪಿ, ಇಲ್ಲಾಂದ್ರೆ ಸರ್ವನಾಶ ಆಗುತ್ತೆ. ಲಿಂಗಾಯತ ಸಮಾಜ ಬಿಜೆಪಿಯಿಂದ ದೂರವಾಗುತ್ತೆ ಎಂದು ದಿಂಗಾಲೇಶ್ವರ ಶ್ರೀ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಬದಲಾವಣೆ ಚರ್ಚೆ ಹಿನ್ನೆಲೆಯಲ್ಲಿ ಇಂದು ಕೆಲ ಮಠಗಳ ಸ್ವಾಮೀಜಿಗಳು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿಂಗಾಲೇಶ್ವರ ಶ್ರೀ, ಕೇವಲ ಲಿಂಗಾಯತ ಸ್ವಾಮಿಗಳು ಬಂದಿಲ್ಲ. ಬೇರೆ ಸಮುದಾಯದ ಸ್ವಾಮೀಜಿ ಗಳು ಬಂದಿದ್ದಾರೆ. ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ನನ್ನ ಕೈಯಲ್ಲಿ ಏನು ಇಲ್ಲ ವರಿಷ್ಠರು ಮಾತು ಕೇಳಬೇಕು ಎಂದಿದ್ದಾರೆ ಎಂದು ಸಿಎಂ ಬದಲಾವಣೆಗೆ ಹೈಕಮಾಂಡ್ ಮುಂದಾಗಿರುವ ಬಗ್ಗೆ ಸ್ಪಷ್ಟಪಡಿಸಿದರು.
ಇನ್ನು ಲಿಂಗಾಯತರನ್ನು ಯಾವುದೇ ಪಕ್ಷ ಸರಿಯಾಗಿ ನಡೆಸಿಕೊಂಡಿಲ್ಲ. ಯಡಿಯೂರಪ್ಪ ಇದ್ರೆ ಮಾತ್ರ ಬಿಜೆಪಿ, ಇಲ್ಲಾಂದ್ರೆ ಸರ್ವನಾಶ ಆಗುತ್ತೆ. ಲಿಂಗಾಯತ ಸಮಾಜ ಬಿಜೆಪಿಯಿಂದ ದೂರವಗುತ್ತೆ ಎಂದು ಎಚ್ಚರಿಕೆ ನೀಡಿದ ಶ್ರೀಗಳು, ನಾವು ವರಿಷ್ಠರಿಗೆ ಮನವಿ ಮಾಡುತ್ತೇವೆ. ಯಡಿಯೂರಪ್ಪ ಅವರನ್ನು ಮುಂದುವರೆಸಿ, ಬೇರೆ ಪಕ್ಷದ ಶಾಸಕರನ್ನು ಕರೆತಂದು ಸರ್ಕಾರ ಮಾಡಿದ್ದಾರೆ. ನೆರೆ ಮತ್ತು ಕೊರೋನಾ ವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಹಾಗಾಗಿ ಯಡಿಯೂರಪ್ಪ ಅವರನ್ನು ಮುಂದುವರಿಸಿ. ಈಗಲೂ ಕಾಲ ಮಿಂಚಿಲ್ಲ ವರಿಷ್ಠರು ಎಚ್ಚೆತ್ತುಕೊಳ್ಳಿ. ಇಲ್ಲದೆ ಹೋದ್ರೆ ಹಿಂದೆ ನಿಮಗಾದ ಪರಿಸ್ಥಿತಿ ಮತ್ತೆ ಬರುತ್ತೆ, ಈ ಹಿಂದೆ ಅದನ್ನು ಬಿಜೆಪಿ ನೋಡಿದೆ. ಅದು ಮತ್ತೆ ಮರಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.










