2ನೇ ಹಂತದ ಅನ್ ಲಾಕ್ ಬಗ್ಗೆ ಬಿಎಸ್‍ವೈ ಮಾಹಿತಿ
ಬೆಂಗಳೂರು : ಕೊರೊನಾ ಪಾಸಿಟಿವಿಟಿ ದರದ ಆಧಾರದ ಮೇಲೆ ರಾಜ್ಯದ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಲ್ಲಿ ಕೆಲ ವಿನಾಯಿತಿ ನೀಡಲಾಗಿದೆ.
ಇದು ಜೂನ್ 21ರ ವರೆಗೂ ಇರಲಿದ್ದು, ಆನಂತರದ ಅನ್ ಲಾಕ್ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂದರೇ ಮುಂದಿನ ಹಂತದ ಅನ್ ಲಾಕ್ ನಲ್ಲಿ ಯಾವ ಯಾವ ವಿನಾಯಿತಿ ಇರಲಿದೆ ಎನ್ನುವುದರ ಬಗ್ಗೆ ಜನರಲ್ಲಿ ಕುತೂಹಲ ಕೆರಳಿಸಿದೆ.
ಈ ವಿಚಾರವಾಗಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಇವತ್ತು ಅಥವ ನಾಳೆಯ ಪರಿಸ್ಥಿತಿ ನೋಡಿಕೊಂಡು ಯಾವ ರೀತಿ ರಿಲ್ಯಾಕ್ಷೇಷನ್ ಕೊಡಬೇಕು ಎಂಬುದರ ಕುರಿತು ಚರ್ಚೆ ಮಾಡ್ತೀನಿ ಎಂದು ತಿಳಿಸಿದ್ದಾರೆ.
ಇದೇ ವೇಳೆ ಅರುಣ್ ಸಿಂಗ್ ಭೇಟಿ ಬಗ್ಗೆ ಮಾತನಾಡಿ, ಅರುಣ್ ಸಿಂಗ್ ನಮ್ಮ ರಾಜ್ಯದ ಉಸ್ತುವಾರಿಗಳು. ಅವರು ನಾಳೆ ರಾಜ್ಯಕ್ಕೆ ಬರ್ತಿದ್ದಾರೆ.
ಅವರು ಎಲ್ಲಾ ಶಾಸಕರು, ಸಂಸದರ ಜೊತೆ ಚರ್ಚೆ ಮಾಡ್ತಾರೆ. ಯಾವುದೇ ಗೊಂದಲ ಇಲ್ಲ, ಯಾರು ಬೇಕಾದರೂ ಅವರನ್ನು ಭೇಟಿ ಮಾಡಬಹುದು
ಅವರು ಗೆಸ್ಟ್ ಹೌಸ್ ನಲ್ಲಿದ್ದು ಎಲ್ಲಾ ವಿಷಯಗಳ ಬಗ್ಗೆ ಸುಧೀರ್ಘ ವಾಗಿ ತಿಳಿದುಕೊಳ್ತಾರೆ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಗೊಂದಲ ಇಲ್ಲ. ನಾನು ಕೂಡ ಅವರ ಜೊತೆ ಅವರಿಗೆ ಎಲ್ಲಾ ರೀತಿಯ ಸಹಕಾರ ಕೊಡ್ತೇನೆ ಎಂದು ಹೇಳಿದರು.









