`ಐದಾರು ಬಾರಿ ಗೆದ್ದಿರುವವರಿಗೆ ಮಂತ್ರಿಗಿರಿ’ : ವಲಸಿಗರಿಗೆ `ರಾಮುಲು ಬಾಣ’
ಮೈಸೂರು : ಸಂಪುಟ ಸರ್ಕಸ್ ಜೋರಾಗುತ್ತಿದ್ದಂತೆ ಬಿಜೆಪಿಯಲ್ಲಿಮೂಲ – ವಲಸಿಗ ಎಂಬ ಆಂತರಿಕ ಯುದ್ಧ ಶುರುವಾಗಿದೆ. ಈ ಬಾರಿ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಲ್ಲಿ ಮೂಲ ಬಿಜೆಪಿಗರಿಗೆ ಆಧ್ಯತೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ – ಜೆಡಿಎಸ್ ನಿಂದ ಬಿಜೆಪಿಗೆ ಬಂದವರಿಗೆ ಹಾಗೂ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಿದವರಿಗೆ ಮಂತ್ರಿಸ್ಥಾನ ಸಿಗಬೇಕೆಂದು ವಲಸಿಗರು ವಾದಿಸುತ್ತಿದ್ದಾರೆ.
ಸಿಎಂ ಬಿಎಸ್ ವೈ ಕೂಡ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದವರ ಋಣ ತೀರಿಸುವ ಮಾತುಗಳನ್ನಾಡುತ್ತಿದ್ದಾರೆ. ರಾಜ್ಯದಲ್ಲಿ ತುಂಬಾ ಕೆಲ್ಸ ಇದೆ, ಬೈ ಎಲೆಕ್ಷನ್ ಗೆ ಸ್ಪರ್ಧಿಸಲ್ಲ : ಸತೀಶ್ ಜಾರಕಿಹೊಳಿ
ಇನ್ನೊಂದಡೆ ಮೂಲ ಬಿಜೆಪಿಗರು ಚುನಾವಣೆಯಲ್ಲಿ ಸೋತಿರುವವರಿಗೆ ಮಂತ್ರಿಸ್ಥಾನ ಯಾಕೆ ನೀಡಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಅದರಲ್ಲೂ ಶಾಸಕ ಎಂ ಪಿ ರೇಣುಕಾಚಾರ್ಯ ಅವರಂತೂ ಸಚಿವಸ್ಥಾನಕ್ಕಾಗಿ ನಾನಾ ಲಾಬಿ ನಡೆಸುತ್ತಿದ್ದಾರೆ.
ಜೊತೆಗೆ ಚುನಾವಣೆಯಲ್ಲಿ ಸೋತವರಿಗೆ ಯಾವುದೇ ಕಾರಣಕ್ಕೂ ಮಂತ್ರಿ ಸ್ಥಾನ ನೀಡಬಾರದು ಎಂದು ಪಟ್ಟು ಹಿಡಿದಿದ್ದಾರೆ. ಹಾಗೇ ಬಿಜೆಪಿಯಿಂದ ನಾಲ್ಕೈದು ಬಾರಿ ಗೆದ್ದವರಿಗೆ ಸಚಿವ ಸ್ಥಾನ ನೀಡಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ.
ರೇಣುಕಾಚಾರ್ಯ ಹೇಳಿಕೆಗೆ ಉಪಚುನಾವಣೆಯಲ್ಲಿ ಸೋತು ಎಂಎಲ್ ಸಿ ಆಗಿರುವ ಎಂಟಿಬಿ ನಾಗರಾಜ್ ಟಾಂಗ್ ನೀಡಿದ್ದು, 105 ಮಂದಿ ಇದ್ದಾಗ ಯಾಕೆ ಸರ್ಕಾರ ರಚನೆ ಆಗಿಲ್ಲ. ಸರ್ಕಾರಕ್ಕೆ (17 ಶಾಸಕರು) ವಲಸಿಗರು – 105 ಮೂಲ ಬಿಜೆಪಿ ಶಾಸಕರು ಕೂಡ ಮುಖ್ಯ ಎಂದಿದ್ದಾರೆ.
ಈ ಮಧ್ಯೆ ಎಂ ಪಿ ರೇಣುಕಾಚಾರ್ಯ ಅವರ ಹೇಳಿಕೆಗೆ ಬಲ ತುಂಬುವಂತೆ ಸಚಿವ ಶ್ರೀರಾಮುಲು ಮಾತನಾಡಿದ್ದು, ನಾನು ಬಿಜೆಪಿಯೇ ಒಂದು ಎಂದು ತಿಳಿಕೊಂಡಿದ್ದೇನೆ.
ಸರ್ಕಾರ ಬಂದ ಮೇಲೆ ಬಿಜೆಪಿಯಲ್ಲಿ ನಿಂತು ಗೆದ್ದಿದ್ದಾರೆ. ಆದರೆ ಐದಾರು ಬಾರಿ ಗೆದ್ದಿರುವ ಕೆಲವರಿಗೆ ಅವಕಾಶ ಸಿಗಬೇಕು. ಜಾತಿ ಗಣತಿ | ಯಾರ್ಯಾರು ಎಷ್ಟಿದ್ದಾರೆ ಎಂಬುದು ನೋಡಬೇಕಲ್ಲವೇ
ಐದಾರು ಬಾರಿ ಗೆದ್ದಿರೋರು ಯಾರ್ಯಾರು ಆಕಾಂಕ್ಷಿಗಳಿದ್ದಾರೋ ಅವರಿಗೆ ಆದ್ಯತೆ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಸೂಕ್ತ ಕಾಲದಲ್ಲಿ ಸೂಕ್ತ ನಿರ್ಣಯ ಕೈಗೊಳ್ತಾರೆ ಅನ್ನೋ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.










