B.Sriramulu ಸಿಎಂ ಇಬ್ರಾಹಿಂ ಸರಸ್ವತಿ ಪುತ್ರ, ಬಿಜೆಪಿಗೆ ಬಂದ್ರೆ ಸ್ವಾಗತ
ಬಳ್ಳಾರಿ : ಸಿಎಂ ಇಬ್ರಾಹಿಂ ಸರಸ್ವತಿ ಪುತ್ರ, ಬಿಜೆಪಿಗೆ ಬರುವುದಾದರೇ ನಾನು ಸ್ವಾಗತ ಮಾಡುತ್ತೇನೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. B Sriramulu cm ibrahim bjp saaksha tv
ಪರಿಷತ್ ವಿಪಕ್ಷ ನಾಯಕ ಸ್ಥಾನ ತಪ್ಪಿದ್ದಕ್ಕಾಗಿ ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಮುಲು, ಸಿಎಂ ಇಬ್ರಾಹಿಂ ಅವರನ್ನು ಕಳೆದುಕೊಂಡು ಕಾಂಗ್ರೆಸ್ ದೊಡ್ಡ ನಷ್ಟ ಹೊಂದಲಿದೆ.
ಇಬ್ರಾಹಿಂ ಸೇರಿದಂತೆ ಮುಸ್ಲಿಂ ಜನರನ್ನು ಕಾಂಗ್ರೆಸ್ ಓಟದ ಬ್ಯಾಂಕ್ ಆಗಿ ಬಳಸಿಕೊಂಡಿದೆ.
ಸಿಎಂ ಇಬ್ರಾಹಿಂ ಬಿಜೆಪಿಗೆ ಬರುವುದಾದರೇ ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಶ್ರೀರಾಮುಲು, ಸಿಎಂ ಇಬ್ರಾಹಿಂ ಸರಸ್ವತಿ ಪುತ್ರ, ಕಾಂಗ್ರೆಸ್ ಪಕ್ಷದ ಸಿನಿಯರ್ ಮೋಸ್ಟ್ ಲೀಡರ್.
ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ ಎಂದರು.









