B Sriramulu | ಅದು ಅವರಪ್ಪ ಕುರ್ಚಿ ಅಲ್ಲ.. ಡಿಕೆಶಿ ಸಿಎಂ ಆಗೋಕೆ ಬಿಡಲ್ಲ
ಕಲಬುರಗಿ : ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗೋಕೆ ನಾವು ಬಿಡೋದಿಲ್ಲ.
ಸಿಎಂ ಆಗಲಿಕೆ ಅದು ಅವರಪ್ಪನ ಕುರ್ಚಿನಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ಬಿ.ಶ್ರೀರಾಮುಲು ಆಕ್ರೋಶ ಹೊರಹಾಕಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೈಸೂರಿನಲ್ಲಿ ಮಾತನಾಡುತ್ತಾ ಎಸ್.ಎಂ ಕೃಷ್ಣಅವರ ಬಳಿಕ ಒಕ್ಕಲಿಗ ಸಮುದಾಯದ ನಾಯಕ ಸಿಎಂ ಆಗುವ ಅವಕಾಶವಿದೆ.
ಈ ಬಾರಿ ನನ್ನ ಬೆಂಬಲಕ್ಕೆ ನಿಲ್ಲಿ. ಮುಂದಿನ ಸಿಎಂ ಯಾರಾಂಥ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು. ಆ ಮೂಲಕ ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು.
ಇದಕ್ಕೆ ಕಲಬುರಗಿಯಲ್ಲಿ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ಡಿಕೆಶಿ ಮುಖ್ಯಮಂತ್ರಿ ಆಗಲಿಕ್ಕೆ ನಾವು ಬಿಟ್ರೆ ತಾನೇ.
ಮುಖ್ಯಮಂತ್ರಿ ಆಗಲಿಕ್ಕೆ ಅದು ಅವರಪ್ಪನ ಕುರ್ಚೀನಾ ಎಂದು ಪ್ರಶ್ನಿಸಿದರು.

ಅಲ್ಲದೆ ಅವರು ಮುಖ್ಯಮಂತ್ರಿ ಆಗಲಿಕ್ಕೆ ಕನಸು ಕಾಣ್ತಿದ್ದಾರೆ.
ನಾವು ಬಿಜೆಪಿಯರು ಗಟ್ಟಿಯಾಗಿ ಕುಂತಿದ್ದೀವಿ ಕುರ್ಚಿ ಖಾಲಿ ಇಲ್ಲ ಎಂದು ಹೇಳಿದರು.
ಇನ್ನು ಸಿದ್ದರಾಮಯ್ಯ – ಡಿ.ಕೆ.ಶಿವಕುಮಾರ್ ಇಬ್ಬರೂ ಸಿಎಂ ಆಗೋಕೆ ಕನಸು ಕಾಣುತ್ತಿದ್ದಾರೆ.
ಸಿದ್ದರಾಮಯ್ಯ ಒಂದು ಕಡೆ ತನ್ನ ಉತ್ಸವ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಒಂದು ರೀತಿ ಉತ್ಸವ ಮೂರ್ತಿ ಇದ್ದಾಗೆ.
ಊರೆಲ್ಲ ತಿರುಗಾಡಿದ್ರೂ ಉತ್ಸವ ಮೂರ್ತಿ ಮತ್ತೆ ಗುಡಿ ಸೇರಬೇಕು.
ಒಟ್ಟಾರೆ ಕಾಂಗ್ರೆಸ್ ಇಡೀ ದೇಶದಲ್ಲಿ ಒಂದು ರಿಜೆಕ್ಟೆಡ್ ಪಾರ್ಟಿ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ : Congress | ಹಿರಿಯರನ್ನು ಮರೆಯುವುದೇ ಬಿಜೆಪಿ ಸಂಸ್ಕೃತಿ








