ಬಸವಕಲ್ಯಾಣ ಉಸ್ತುವಾರಿ ಬದಲಾವಣೆ : ವಿಜಯೇಂದ್ರ ವೇಗಕ್ಕೆ ಬ್ರೇಕ್…?
ಬೆಂಗಳೂರು : ರಾಜ್ಯ ಬಿಜೆಪಿಯ ರಾಜಾಹುಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಥಟ್ ಅಂತ ಸಿಗೋ ಉತ್ತರ ಬಿ.ವೈ ವಿಜಯೇಂದ್ರ. ಇದಕ್ಕೆ ಅನೇಕ ಘಟನೆಗಳು ಪುಷ್ಠಿ ನೀಡಿವೆ. ಪಕ್ಷದಲ್ಲಿ ಅವರ ಬೆಳವಣಿಗೆ ಕೂಡ ಅದೇ ರೀತಿ ಇದೆ. ಇನ್ನು ಬಿಎಸ್ ವೈ ಅವರ ಬೆಂಬಲಗರಿಗೂ ಕೂಡ ವಿಜಯೇಂದ್ರ ಅವರನ್ನು ಮುಂದಿನ ಸಿಎಂ ಎಂದೇ ಬಿಂಬಿಸುತ್ತಿದ್ದಾರೆ. ಆದ್ರೆ ಪಕ್ಷದಲ್ಲಿರುವ ನಿಷ್ಠಾವಂತ ಕಾರ್ಯಕರ್ತರು, ನಾಯಕರು ವಿಜಯೇಂದ್ರ ವೇಗಕ್ಕೆ ಬ್ರೇಕ್ ಹಾಕಲು ಸತತ ಪ್ರಯತ್ನದಲ್ಲಿದ್ದಾರೆ.
ಬಸವಕಲ್ಯಾಣ ಉಸ್ತುವಾರಿ ಬದಲಾವಣೆ : ಷಡ್ಯಂತ್ರ
ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಬಿವೈ.ವಿಜಯೇಂದ್ರ ಅವರನ್ನು ಈ ಮೊದಲು ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯ ಉಸ್ತುವಾರಿಯನ್ನಾಗಿ ಬಿಜೆಪಿ ಘೋಷಿಸಿತ್ತು. ವಿಜಯೇಂದ್ರ ಯಡಿಯೂರಪ್ಪನವರು ಬಸವಕಲ್ಯಾಣ ಕ್ಷೇತ್ರಕ್ಕೆ ಪ್ರವಾಸ ಮಾಡಿ ಚುನಾವಣಾ ಕಣವನ್ನು ಹದಗೊಳಿಸಿ ಬಂದಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ವಿಜಯೇಂದ್ರ ಅವರನ್ನು ಬಸವಕಲ್ಯಾಣ ಕ್ಷೇತ್ರದ ಚುನಾವಣಾ ಉಸ್ತುವಾರಿಯಿಂದ ಬಿಡುಗಡೆಗೊಳಿಸಿ ಮಸ್ಕಿ ಕ್ಷೇತ್ರದ ಉಸ್ತುವಾರಿಗಳ ಪಟ್ಟಿಯಲ್ಲಿ ಹಾಕಿದ್ದಾರೆ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಇದನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಎಲ್ಲೊ ಒಂದು ಕಡೆ, ರಾಜ್ಯ – ದೆಹಲಿ ನಾಯಕರೇ ವಿಜಯೇಂದ್ರ ವೇಗಕ್ಕೆ ಬ್ರೇಕ್ ಹಾಕಲು ಪ್ರಯತ್ನಿಸುತ್ತಿದ್ದಾರೆ ಅನ್ನೋ ಅನುಮಾನ ಮೂಡುವಂತೆ ಮಾಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel