ಪಕ್ಷದಲ್ಲಿ ಮುಸುಕಿನ ಗುದ್ದಾಟ : ಸತ್ಯ ಒಪ್ಪಿಕೊಂಡ ವಿಜಯೇಂದ್ರ
ಚಾಮರಾಜನಗರ : ಸೋತವರಿಗೆ ಮಂತ್ರಿಸ್ಥಾನ ಕೊಡುವ ಬಗ್ಗೆ ಪಕ್ಷದಲ್ಲಿ ಕೆಲ ನಾಯಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸಿಎಂ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಸೋತವರಿಗೆ ಮಂತ್ರಿಗಿರಿ ನೀಡಬಾರದ ಎನ್ನುವ ರೇಣುಕಾಚಾರ್ಯ ಹೇಳಿಕೆ ಸರಿಯಾಗಿ ಇದೆ ಎಂದು ಹೇಳುವ ಮೂಲಕ ಮುಸುಕಿನ ಗುದ್ದಾಟವನ್ನ ಒಪ್ಪಿಕೊಂಡರು.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಸೋತವರಿಗೆ ಸಚಿವಸ್ಥಾನ ನೀಡಬಾರದು ಎನ್ನುತ್ತಿರುವ ರೇಣುಚಾಕಾರ್ಯ ಹೇಳಿಕೆ ಸರಿಯಾಗಿದೆ.
ಸರ್ಕಾರ ನಮ್ ಜೊತೆ ನಿಲ್ಲಲಿಲ್ಲ : ಹೆಚ್.ವಿಶ್ವನಾಥ್ ತೀವ್ರ ಅಸಮಾಧಾನ
ವಲಸಿಗರು ಹೇಳುವುದು ಸರಿ ಇದೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಶಕ್ತಿ ಯಡಿಯೂರಪ್ಪನವರಿಗೆ ಇದೆ. ಬರುವ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.
ಇನ್ನು “ನಮ್ಮಿಂದ ಸರ್ಕಾರ ಬಂದರೂ ನಮ್ಮ ಜೊತೆ ನಿಲ್ಲಲಿಲ್ಲ’ ಎಂಬ ಹೆಚ್ ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ವಿಶ್ವನಾಥ್ ಹಿರಿಯರಿದ್ದಾರೆ. ಹೈಕೋರ್ಟ್ ಮಧ್ಯಂತರ ತೀರ್ಪು ಅಘಾತವನ್ನ ತಂದಿದೆ.
ಹಿರಿಯರು ಕುಳಿತುಕೊಂಡ ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದರು. ಇನ್ನು ಪಕ್ಷದಲ್ಲಿ ವ್ಯವಸ್ಥಿತವಾಗಿ ವಿಶ್ವನಾಥ್ ಅವರನ್ನ ಕಡೆಗಣಿಸುತ್ತಿರುವ ವಿಚಾರದ ಬಗ್ಗೆ ಗೊತ್ತಿಲ್ಲ.
ಪಕ್ಷವನ್ನ ನಂಬಿ ಬಂದವರಿಗೆ ಬಿ.ಎಸ್ ಯಡಿಯೂರಪ್ಪನವರು ಬೆಂಬಲವನ್ನ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಅವರ “ಅಪ್ಪ ಚೆಕ್ ಮೂಲಕ, ಮಗ ಆರ್‍ಟಿಜಿಎಸ್ ಮೂಲಕ ಲಂಚ ತಗೋತಾರೆ” ಎಂಬ ಆರೋಪಕ್ಕೆ ವಿಜಯೇಂದ್ರ ಅವರು ಟಾಂಗ್ ನೀಡಿದರು.
ಸಿದ್ದರಾಮಯ್ಯ ಒಬ್ಬ ಅಡ್ವೊಕೇಟ್. ಚೆಕ್ ಅಥವಾ ಆರ್‍ಟಿಜಿಎಸ್ ಮೂಲಕ ಲಂಚ ತೆಗೆದುಕೊಂಡಿದ್ದರೆ ಮಾಧ್ಯಮಗಳ ಮುಂದೆ ಬಂದು ತೋರಿಸಲಿ.
ಸುಮ್ನೆ ಯಾರೋ ರಸ್ತೆಲಿ ಬಂದೋನು ಆರೋಪ ಮಾಡ್ತಾನೆ ಅಂತ ಮುಖಂಡರುಗಳು ಮಾತನಾಡೋದ್ರಲ್ಲಿ ಅರ್ಥ ಇಲ್ಲ ಎಂದು ಕಿಡಿಕಾರಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










