ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಬಾ..ಬಾ..ನಾ..ರೆಡಿ ಎಂಬ ಹಾಡು ಇದೀಗ ಯೂಟ್ಯೂಬ್ ನಲಿ ರಿಲೀಸ್ ಆಗಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಹಾಡು ವೈರಲ್ ಆಗಿದ್ದು, ಸಕತ್ ಧೂಳೆಬ್ಬಿಸಿದೆ.
ಚಿತ್ರದ ಹಾಡಿಗೆ ಸ್ಯಾಂಡಲ್ ವುಡ್ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು. ಡಿ ಬಾಸ್ ಅಭಿಮಾನಿಗಳ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ ಸಂಯೋಜನೆಯ ಬಾ..ಬಾ..ನಾ.. ರೆಡಿ ಗೀತೆ ಮಾಸ್ ಆಡಿಯನ್ಸ್ ಗಳ ಗಮನದಲ್ಲಿಟ್ಟುಕೊಂಡು ಬರೆದಂತಿದೆ. ಚಿತ್ರ ಪ್ರತಿಯೊಂದು ಅಕ್ಷರಗಳಲು ‘ಡಿ’ ಪದ ಬಳಸಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ. ಈಗಾಗಲೇ ನಾ ರೆಡಿ ‘ರಾಬರ್ಟ್’ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಸದ್ಯ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು, ಇದೇ ಏಪ್ರಿಲ್ ಹೂತ್ತಿಗೆ ರಾಬರ್ಟ್ ವಿಶ್ವಾದ್ಯಂತ ಅಬ್ಬರಿಸಲಿದ್ದಾನೆ ಎಂದು ಹೇಳಲಾಗಿದೆ.








