Babar Azam | ಕೊಹ್ಲಿ, ರೋಹಿತ್ ದಾಖಲೆ ಮುರಿದ ಬಾಬರ್
ನ್ಯೂಜಿಲೆಂಡ್ ವೇದಿಕೆಯಾಗಿ ನಡೆಯುತ್ತಿರುವ ಸರಣಿಯಲ್ಲಿ ಸೂಪರ್ ಫಾರ್ಮ್ ನಲ್ಲಿರುವ ಪಾಕ್ ತಂಡದ ಕ್ಯಾಪ್ಟನ್ ಬಾಬರ್ ಅಜಂ ಬ್ಯಾಕ್ ಟು ಬ್ಯಾಕ್ ಹಾಫ್ ಸೆಂಚೂರಿಗಳನ್ನು ಸಿಡಿಸಿ ಮಿಂಚು ಹರಿಸಿದ್ದಾರೆ.
ಇದರೊಂದಿಗೆ ಅವರು ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ.

ಬಾಂಗ್ಲದೇಶ ವಿರುದ್ಧದ ಪಂದ್ಯದಲ್ಲಿ ಬಾಬರ್ ಅರ್ಧಶತಕ ಸಿಡಿದ ಬಾಬರ್ ಮೂರು ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 11000 ರನ್ ಗಳ ಮೈಲಿಗಲ್ಲನ್ನು ದಾಟಿದರು.
ಈ ದಾಖಲೆ ಈ ಹಿಂದೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ 261 ಇನ್ನಿಂಗ್ಸ್ ಗಳಲ್ಲಿ 11000 ರನ್ ಗಡಿ ದಾಟಿದರು.
ಬಾಬರ್ 251 ಇನ್ನಿಂಗ್ಸ್ ನಲ್ಲಿ ಆ ಗಡಿದಾಟಿದ್ದಾರೆ. ಬಾಬರ್ 42 ಪಂದ್ಯಗಳಲ್ಲಿ 3122 ರನ್, 92 ಪಂದ್ಯಗಳಲ್ಲಿ 4661 ರನ್, 91 ಟಿ 20 ಪಂದ್ಯಗಳಲ್ಲಿ 3216 ರನ್ ಗಳಿಸಿದ್ದಾರೆ.








