Babar Azam : ಹನಿಟ್ರ್ಯಾಪ್ ಗೆ ಸಿಲುಕಿಕೊಂಡ ಪಾಕ್ ಕ್ರಿಕೆಟಿಗಾ..?? ಖಾಸಗಿ ಮೆಸೆಜ್, ಪೋಟೋ ಲೀಕ್…
ಪಾಕಿಸ್ತಾನದ ಕ್ರಿಕೆಟಿಗ ಮತ್ತು ತಂಡದ ನಾಯಕ ಬಾಬರ್ ಅಜಮ್ ಹಗರಣವೊಂದರಲ್ಲಿ ಸಿಲುಕಿಕೊಂಡಿದ್ದಾರೆ. 28 ವರ್ಷದ ಬಾಬರ್ ತನ್ನ ಸಹ ಆಟಗಾರನ ಗೆಳತಿಯೊಂದಿಗೆ ಖಾಸಗಿ ಮೆಸೆಜ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್ ಶಾಟ್ ಮತ್ತು ಖಾಸಗಿ ಪೋಟೋ ವಿಡಿಯೊಗಳು ಲೀಕ್ ಆಗಿವೆ.
ಸೋಶಿಯಲ್ ಮೀಡಿಯಾಗಳಲ್ಲಿ ಪೋಟೋಗಳು ವೈರಲ್ ಆಗುತ್ತಿವೆ. ಇಶಾ ರಜಪೂತ್ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಪೋಟೋಗಳನ್ನ ಅಪ್ಲೋಡ್ ಮಾಡಲಾಗಿದೆ. ಈ ಹುಡುಗಿಯ ಜೊತೆಗೆ ವಿಡಿಯೋ ಕಾಲ್ ಮತ್ತು ಟೆಕ್ಸ್ಟ್ ಮಾಡಿರುವ ಸ್ಕ್ರೀನ್ ಶಾಟ್ ಗಳು ಹರಿದಾಡುತ್ತಿವೆ.
ಬಾಬರ್ ಅಜಮ್ ಹನಿಟ್ರಾಪ್ ಗೆ ಸಿಲುಕಿಹಾಕಿಕೊಂಡಿರುವ ಆರೋಪ ವ್ಯಕ್ತವಾಗಿದೆ. ಬಾಬರ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಸೋತ ಬಳಿಕ ನಾಯಕತ್ವದ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ. ಈ ನಡುವೆ ಈ ವೀಡಿಯೋ, ಫೋಟೋಗಳು ಹರಿದಾಡುತ್ತಿವೆ. ವೈಯಕ್ತಿಕವಾಗಿಯೂ ಹಲವು ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಬಾಬರ್ ಇದೀಗ ಕೆಟ್ಟ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ.
ಪಾಕಿಸ್ತಾನದ ನಾಯಕನ ಖಾಸಗಿ ಚಿತ್ರಗಳು ಮತ್ತು ವೀಡಿಯೊಗಳು ಆನ್ಲೈನ್ನಲ್ಲಿ ಸೋರಿಕೆಯಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿವೆ. ಸೋರಿಕೆಯಾದ ಚಿತ್ರಗಳು ಅವರದ್ದೇ ಎಂದು ಕೆಲವರು ನಂಬಿದರೇ ಇನ್ನೂ ಕೆಲವರು ಮಾನಹಾನಿ ಮಾಡಲು ಈ ರೀತಿ ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬಾಬರ್ ನಿಂದ ನಾಯಕತ್ವವನ್ನ ಕಿತ್ತುಕೊಳ್ಳಲು ಈ ಸಂಚು ಎಂದು ಇನ್ನು ಕೆಲವರು ಆರೋಪಿಸಿದ್ದಾರೆ.
Babar Azam : Pakistan skipper honey trapped ? pictures and videos allegedly leaked