ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಇಂದು ರಾಮಮಂದಿರ ನಿರ್ಮಾಣಕ್ಕೆ ಅದ್ಧೂರಿ ಶಿಲಾನ್ಯಾಸ ಸಮಾರಂಭ ಜರುಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದು, ಇಡೀ ದೇಶವೇ ರಾಮ ಮಂದಿರ ನಿರ್ಮಾಣದ ನಿರ್ಧಾರವನ್ನು ಸ್ವಾಗತಿಸಿದೆ. ಆದ್ರೆ ಇಂದು ವಿಚಾರವಾಗಿ ಮಾತನಾಡಿರುವ ಎಐಎಂಐಎಂ ನಾಯಕ ಅಸದುದ್ದೀನ್ ಒವೈಸಿ ಅವರು ಬಾಬ್ರಿ ಮಸೀದಿ ಘಟನೆಯನ್ನು ಅಯೋಧ್ಯೆಯ ಪರಂಪರೆಯಿಂದ ಅಳಿಸಲಾಗುವುದಿಲ್ಲ ಎಂದು ರಾಮಮಂದಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಓವೈಸಿ “ಬಾಬ್ರಿ ಜಿಂದಾ ಹೈ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ , “ಬಾಬರಿ ಮಸೀದಿ ಥಿ, ಹೈ, ರಹೇಗಿ” ಎಂದು ಬರೆದುಕೊಂಡಿದ್ದಾರೆ. ಬಾಬ್ರಿ ಮಸೀದಿ ಅಲ್ಲೇ ಇತ್ತು, ಅಲ್ಲೇ ಇದೆ, ಅಲ್ಲೇ ಇರಲಿದೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಓವೈಸಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಸರ್ಕಾರದ ನಿಲುವನ್ನು ಟೀಕಿಸಿದ್ದಾರೆ.









