ಬಿಜೆಪಿ ಭೀಷ್ಮ ಎಲ್.ಕೆ ಅಡ್ವಾಣಿಗೆ ಕ್ಲೀನ್‍ಚಿಟ್
ಉಮಾಭಾರತಿ, ಜೋಷಿ, ಕಲ್ಯಾಣ್‍ಸಿಂಗ್ ಸೇರಿ ಎಲ್ಲಾ ಅರೋಪಿಗಳು ನಿರ್ದೋಷಿ
28 ವರ್ಷಗಳ ಬಳಿಕ ಸಿಬಿಐ ಕೋರ್ಟ್‍ನಿಂದ ಐತಿಹಾಸಿಕ ತೀರ್ಪು
ನವದೆಹಲಿ: ವಿವಾದಿತ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌದ ವಿಶೇಷ ಸಿಬಿಐ ಕೋರ್ಟ್ 28 ವರ್ಷಗಳ ಬಳಿಕ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಬಿಜೆಪಿಯ ಭೀಷ್ಮ ಎಂದೇ ಖ್ಯಾತರಾದ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ, ಕಲ್ಯಾಣ್‍ಸಿಂಗ್ ಸೇರಿದಂತೆ ಎಲ್ಲಾ 32 ಆರೋಪಿಗಳನ್ನು ದೋಷಮುಕ್ತಗೊಳಿಸಿ ಖುಲಾಸೆಗೊಳಿಸಿದೆ.
ಬಾಬ್ರಿ ಮಸೀದಿಗೆ ಧ್ವಂಸಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಆರೋಪ ಸಾಬೀತುಪಡಿಸುವಂತೆ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ಸಿಬಿಐ ವಿಫಲವಾಗಿದೆ. ಇವರ ವಿರುದ್ಧ ಸಲ್ಲಿರುವ ಸಾಕ್ಷ್ಯಾಧಾರಗಳು ಆರೋಪ ಸಾಬೀತುಪಡಿಸಲು ಪೂರಕವಾಗಿಲ್ಲ. ಹೀಗಾಗಿ ಪ್ರಕರಣದಿಂದ ಎಲ್ಲಾ ಅರೋಪಿಗಳನ್ನು ನಿರ್ದೋಷಿಗಳು ಎಂದು ಲಖನೌ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಕೆ ಯಾದವ್ ಪ್ರಕಟಿಸಿದರು.
ಬಾಬ್ರಿ ಮಸೀದಿ ಧ್ವಂದ ಪೂರ್ವ ನಿಯೋಜಿತ ಅಲ್ಲ. ಎಲ್.ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ ಕರ ಸೇವಕರನ್ನು ತಡೆಯಲು ಪ್ರಯತ್ನಿಸಿದರು. ಆದರೂ, ಉದ್ರಿಕ್ತ ಗುಂಪು ಮಸೀದಿಯನ್ನು ಧ್ವಂಸ ಮಾಡಿತು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಲಖನೌ ಸಿಬಿಐ ವಿಶೇಷ ಕೋರ್ಟ್‍ನ ತೀರ್ಪಿನಿಂದ ಎಲ್ಲಾ ಬಿಜೆಪಿ ನಾಯಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.
28 ವರ್ಷಗಳ ಬಳಿಕ ಐತಿಕಾಸಿಕ ತೀರ್ಪು
1992ರ ಡಿಸೆಂಬರ್ 6ರಂದು ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಹಿಂದೂ ಕರಸೇವಕರು ಧ್ವಂಸ ಮಾಡಿದ್ದರು. ಬಾಬ್ರಿ ಮಸೀದಿ ಧ್ವಂಸ ಬಳಿಕ ದೇಶಾದ್ಯಂತ ಹಿಂಸಾಚಾರ ನಡೆದು 2 ಸಾವಿರ ಮಂದಿ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಸಿಬಿಐ, 350 ಸಾಕ್ಷಿಗಳು, 600ಕ್ಕೂ ಹೆಚ್ಚು ದಾಖಲೆಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಪ್ರಕರಣ ಸಂಬಂಧ 49 ಎಫ್‍ಐಆರ್‍ಗಳನ್ನು ಸಿಬಿಐ ಸಲ್ಲಿಸಿತ್ತು. 17 ವರ್ಷಗಳ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಕೋರ್ಟ್‍ಗೆ 3500 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದರು.
ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ಇಂದು 28 ವರ್ಷಗಳ ಬಳಿಕ ಐತಿಹಾಸಿಕ ತೀರ್ಪು ಪ್ರಕಟಿಸಿದ್ದಾರೆ.