ಬಚ್ಚನ್ ಪಾಂಡೆಯಿಂದ ರಿಲೀಸ್ ಆದ ಮೇರಿ ಜಾನ್ – ಮೇರಿ ಜಾನ್ ಹಾಡು…
ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಪಾಂಡೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಭರ್ಜರಿ ಆಕ್ಷನ್ ತೋರಿಸಲಾಗಿದೆ. ಇದೀಗ ಬಚ್ಚನ್ ಪಾಂಡೆಯವರ ಹೊಸ ಹಾಡು ಮೇರಿ ಜಾನ್-ಮೇರಿ ಜಾನ್ ಕೂಡ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿ ತೋರಿಸಿರುವ ದಮ್ ಗೆ ವಿರುದ್ಧವಾಗಿ ರೊಮ್ಯಾಂಟಿಕ್ ಸಾಂಗ್ ಮೂಡಿಬಂದಿದೆ.
ಇದು ಬಚ್ಚನ್ ಪಾಂಡೆ ಚಿತ್ರದ ಎರಡನೇ ಹಾಡು. ಮೊನ್ನೆಯಷ್ಟೇ ‘ಮಾರ್ ಖಯೇಗಾ’ ಹಾಡು ಬಿಡುಗಡೆಯಾಗಿತ್ತು. ಮೇರಿ ಜಾನ್-ಮೇರಿ ಜಾನ್ ಹಾಡಿನ ಸಾಹಿತ್ಯವನ್ನು ಜಾನಿ ಬರೆದಿದ್ದಾರೆ ಮತ್ತು ಬಿ ಪ್ರಾಕ್ ಹಾಡಿದ್ದಾರೆ. ಹಾಡಿನ ಸಾಹಿತ್ಯ ಹೃದಯ ಸ್ಪರ್ಶಿಯಾಗಿದ್ದು ಟಿ-ಸೀರೀಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ. ಇತ್ತೀಚೆಗಷ್ಟೇ ಬಚ್ಚನ್ ಪಾಂಡೆ ಚಿತ್ರದ ಟ್ರೈಲರ್ ಕೂಡ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಮೇರಿ ಜಾನ್ ಹಾಡನ್ನ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕೃತಿ ಸನನ್ ಕೂಡ ಈ ಹಾಡನ್ನ ತಮ್ಮ ಇನ್ಸ್ಟಾ ಖಾತಯಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಅಕ್ಷಯ್ ಕುಮಾರ್ ದರೋಡೆಕೋರನ ಪಾತ್ರವನ್ನು ನಿರ್ವಹಿಸಿದ್ದಾರೆ. ನಟನಾಗಲು ಹಂಬಲಿಸುವ ಗ್ಯಾಂಗ್‌ಸ್ಟರ್‌ನ ಜೀವನವನ್ನ ಚಿತ್ರದ ಕಥೆ ಆಧರಿಸಿದೆ. ಕೃತಿ ಸನನ್ ಹೊರತಾಗಿ, ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ನಟಿಸಿದ್ದಾರೆ. ಮಾರ್ಚ್ 18 ರಂದು ಹೋಳಿ ಹಬ್ಬದಂದು ಚಿತ್ರ ಬಿಡುಗಡೆಯಾಗಲಿದೆ.








