ಮಲಯಾಳಂ ಚಿತ್ರರಂಗದಲ್ಲಿ ನಟಿಯರ ವಿರುದ್ಧ ಲೈಂಗಿಕ ಕಿರುಕುಳದ ಭಾರೀ ಸದ್ದು ಮಾಡುತ್ತಿದೆ. ಈಗ ಸ್ಯಾಂಡಲ್ ವುಡ್ ನಲ್ಲಿಯೂ ಸಮಿತಿ ರಚಿಸುವಂತೆ Sandalwood) ಆಗ್ರಹ ಕೇಳಿ ಬರುತ್ತಿದೆ.
ಫೈರ್ ಸಂಸ್ಥೆ ಬಗ್ಗೆ ಮತ್ತು ಸ್ಯಾಂಡಲ್ವುಡ್ ಕಾಸ್ಟಿಂಗ್ ಕೌಚ್ (Casting Couch) ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ನಟಿ ಸಂಜನಾ ಗಲ್ರಾನಿ ಮಾತನಾಡಿದ್ದಾರೆ.
ನನ್ನ ಲೈಫ್ನಲ್ಲಿ ಆಗಿದ್ದು, ಬೇರೆ ಅವರಿಗೆ ಆಗಬಾರದು. ಹೀರೋಯಿನ್ ಮಾಡ್ತೀನಿ ಅಂತ ತಪ್ಪು ದಾರಿಗೆ ಎಳೆಯುತ್ತಾರೆ ಎಂದು ಸಂಜನಾ ಆರೋಪಿಸಿದ್ದಾರೆ.
ನಾನು ಈ ಹಿಂದೆಯೇ ಮೀಟೂ ಪ್ರಕರಣದಲ್ಲಿ ಮಾತಾಡಿದ್ದೆ. ಆಗ ನನ್ನ ವಿರುದ್ಧ ಹಲವರು ಮುಗಿ ಬಿದ್ದರು. ನನ್ನ ಲೈಫ್ನಲ್ಲಿ ನಡೆದಿದ್ದು, ಬೇರೆ ಅವರಿಗೆ ಆಗಬಾರದು. ಚಿತ್ರರಂಗಕ್ಕೆ ಬರುವ ಹೊಸ ನಟಿಯರಿಗೆ ಈ ರೀತಿ ತೊಂದರೆ ಆಗಬಾರದು. ಅವತ್ತು ಅದರಿಂದ ಹೊರಗೆ ಬಂದು 55 ಸಿನಿಮಾ ಮಾಡಿ ಗುರುತಿಸಿಕೊಂಡಿದ್ದೇನೆ. ಈಗಲೂ 2 ಸಿನಿಮಾ ಮಾಡುತ್ತಿದ್ದೇನೆ. ನನಗೆ ಆದ ಹಾಗೆ ಬೇರೆ ಯಾರಿಗೂ ಆಗಬಾರದು ಎಂದು ಬೇಸರದಿಂದ ಹೇಳಿದ್ದಾರೆ.
ಫೈರ್’ ಎನ್ನುವ ಸಂಸ್ಥೆಯದು ಅದ್ಭುತವಾದ ಐಡಿಯಾ. ನಟ ಚೇತನ್ ಅವರು ನನಗೂ ಕರೆ ಮಾಡಿ ತಿಳಿಸಿದರು. ಇದು ಮುಂದೆವರೆಯಬೇಕು. ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವ ಜೊತೆ ಆಫೀಸ್ ಕೂಡ ವ್ಯವಸ್ಥೆ ಮಾಡಬೇಕಿದೆ. ಇದು ಆ್ಯಕ್ಟೀವ್ ಆಗಿ ನಡೆಯಬೇಕಿದೆ ಎಂದು ಹೇಳಿದ್ದಾರೆ.