‘ಬಡವ ರಾಸ್ಕಲ್’ ಗೂ ಪೈರೆಸಿ ಕಾಟ..!
ಕನ್ನಡದಲ್ಲಿ ಕಳೆದೆರೆಡು ವಾರಗಳಲ್ಲಿ ಕೆಲ ಸಿನಿಮಾಗಳು ರಿಲೀಸ್ ಆಗಿವೆ.. ಈ ಸಿನಿಮಾಗಳು ಒಂದೆಡೆ ಡಬ್ಬಿಂಗ್ ಸಿನಿಮಾಗಳ ಹಾವಳಿಯಿಂದ ತೊಂದರೆ ಅನುಭವಿಸಿದ್ರೆ , ಇತ್ತ ಪೈರೆಸಿಯಾಗಿ ಸಮಸ್ಯೆ ಎದುರಿಸಿವೆ.. ಅಂತೆಯೇ ಡಿಸೆಂಬರ್ 24 ಕ್ಕೆ ರಿಲೀಸ್ ಆಗಿದ್ದ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾ ಕೂಡ ಪೈರೆಸಿಗೆ ತುತ್ತಾಗಿತ್ತು.. ಈಗ ಡಾಲಿ ಧನಂಜಯ್ ಖುದ್ದು ನಿರ್ಮಿಸಿ ನಟಿಸಿರುವ ‘ಬಡವ ರಾಸ್ಕಲ್’ ಸಿನಿಮಾ ಲೀಕ್ ಆಗಿದೆ.. ಹೌದು.. ಥಿಯೇಟರ್ ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿರುವ ‘ಬಡವ ರಾಸ್ಕಲ್, ನ ಮೇಲೂ ಪೈರೆಸಿ ಕರಿನೆರಳು ಬಿದ್ದಿದೆ..
ಕಳೆದ ಶುಕ್ರವಾರ ಬಿಡುಗಡೆ ಆಗಿದ್ದ ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಸೋಮವಾರದಂದು ಸಿನಿಮಾದ ಪೈರಸಿ ಕಾಪಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.. ಸದ್ಯ ‘ಬಡವ ರಾಸ್ಕಲ್’ ಟೀಮ್ ಸಿನಿಮಾದ ಕಾಪಿಗಳನ್ನ ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿಸುವ ಕಾರ್ಯದಲ್ಲಿ ನಿರತರಾಗಿದ್ಧಾರೆ..
ಈ ಬಗ್ಗೆ ಆಕ್ರೋಶ ಹೊರಹಾಕಿರುವ ನಿರ್ದೇಶಕ ಶಂಕರ್ ಅವರು ‘ಯಾರೊ ಕ್ರಿಮಿಗಳು ನಮ್ಮ ಸಿನಿಮಾದ ವಿರುದ್ಧ ಈ ಕುತಂತ್ರ ಮಾಡಿದ್ದಾರೆ. ಸಿನಿಮಾ ಪೈರಸಿ ಮಾಡಿದ ಕ್ರಿಮಿನಲ್ ಗಳನ್ನು ಸುಮ್ಮನೆ ಬಿಡಲ್ಲ. ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡೇ ತೀರುತ್ತೇವೆ’ ಎಂದು ಕಿಡಿಕಾರಿದ್ದಾರೆ..