Bagalakote : ರಾಜ್ಯದಲ್ಲಿ ಮತ್ತೊಂದು ಮರ್ಯಾದೆ ಹತ್ಯೆ – ಅಳಿಯನ ಕೊಚ್ಚಿ ಕೊಂದ ಮಾವ
ರಾಜ್ಯದಲ್ಲಿ ಮತ್ತೊಂದು ಮರ್ಯಾದೆ ಹತ್ಯೆ
ಮಗಳ ಪತಿಯನ್ನ ಕೊಚ್ಚಿ ಕೊಂದ ಮಾವ
ಅನ್ಯ ಸಮುದಾಯದವನನ್ನ ಮದುವೆಯಾಗಿದ್ದ ಮಗಳು
ಜಮಖಂಡಿಯ ಟಕ್ಕೋಡ ಗ್ರಾಮದಲ್ಲಿ ಘಟನೆ
ವರ್ಷದ ಹಿಂದೆ ಮನೆ ಬಿಟ್ಟು ಹೋಗಿ ಮದುವೆ ಯಾಗಿದ್ದ ಜೋಡಿ
ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
ರಾಜ್ಯದಲ್ಲಿ ಮತ್ತೊಂದು ಮರ್ಯಾದೆ ಹತ್ಯೆ ನಡೆದಿದೆ…
ಸ್ವಂತ ತಂದೆಯೇ ತನ್ನ ಮಗಳ ಬದುಕನ್ನ ನಾಶ ಮಾಡಿರೋ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ..
ಮಗಳನ್ನು ಪ್ರೀತಿಸಿ ಮದುವೆ ಆಗಿದ್ದಾನೆ ಎಂಬ ಸಿಟ್ಟಿಗೆ ಅಳಿಯನ ಕಣ್ಣಿಗೆ ಖಾರದಪುಡಿ ಎರಚಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ..
ಬಾಗಲಕೋಟೆ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದ ಹನುಮಾನ್ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ.
ಅಳಿಯ ಭುಜಬಲ ಕರ್ಜಗಿ (34) ಹತ್ಯೆಗೀಡಾಗಿದ್ದು, ಮಾವ ತಮ್ಮನಗೌಡನನ್ನ ಪೊಲೀಸರು ಬಂಧಿಸಿ ಇನ್ನಿಬ್ಬರು ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ..
ಮಗಳು ಭಾಗ್ಯಶ್ರೀ ಕ್ಷತ್ರೀಯ ಜಾತಿಯವಳಾಗಿದ್ದು ಜೈನ ಸಮುದಾಯದ ಭುಜಬಲನನ್ನ ಪ್ರೀತಿಸಿ ವರ್ಷದ ಹಿಂದೆ ಮನೆ ಬಿಟ್ಟು ಹೋಗಿ ಮದುವೆ ಆಗಿದ್ದರು. ಬಳಿಕ ಇಬ್ಬರೂ ಟಕ್ಕೋಡ ಗ್ರಾಮದಲ್ಲೇ ಬಂದು ನೆಲೆಸಿದ್ದರು. ಇದೀಗ ಭುಜಬಲನನ್ನ ಭಾಗ್ಯಶ್ರೀ ತಂದೆ ಕೊಂದು ಜೈಲು ಸೇರಿದ್ದಾನೆ,..
ಘಟನೆ ಸಂಬಂಧ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..