Hijab controvercy : ಬಾಗಲಕೋಟೆಯಲ್ಲಿ ಮಕ್ಕಳು ಹಿಜಾಬ್ ಧರಿಸಿ ನಮಾಜ್ ಮಾಡಿದ ವಿಡೊಯೊ ವೈರಲ್
ಬಾಗಲಕೋಟೆ : ರಾಜ್ಯದಲ್ಲಿ ಹಿಜಾಬ್ – ಕೇಸರಿ ಶಾಲು ಸಂಘರ್ಷದ ನಡುವೆಯೇ ಬಾಗಲಕೋಟೆಯಲ್ಲಿ ಮಕ್ಕಳು ಹಿಜಾಬ್ ಧರಿಸಿ ನಮಾಜ್ ಮಾಡಿದ ವಿಡೊಯೊ ವೈರಲ್ ಆಗಿದೆ.. ಬಾಗಲಕೋಟ ಜಿಲ್ಲೆ ಇಳಕಲ್ ನಗರದಲ್ಲಿ ಘಟನೆ ನಡೆದಿದೆ…
ನಗರದ ಮೌಲಾನಾ ಆಜಾದ್ ಆಂಗ್ಲ ಮಾದ್ಯಮ ಸರಕಾರಿ ಶಾಲೆಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಶಾಲಾ ಕೊಠಡಿ ವರಾಂಡಾದಲ್ಲಿ ಕುಳಿತು ನಮಾಜ್ ಮಾಡಿರುವ ವಿಡಿಯೋ ಇದಾಗಿದೆ. 6 ಜನ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ನಮಾಜ್ ಮಾಡಿದ್ದಾರೆ..
ಶಿಕ್ಷಕರ ಗಮನಕ್ಕೆ ಬಾರದೆ ಒಂದೆರಡು ನಿಮಿಷ ನಮಾಜ್ ಮಾಡಿದ್ದಾರೆ ಎನ್ನಲಾಗಿದೆ.. ಮಕ್ಕಳು.. ನಮಾಜ್ ಮಾಡಿದ ವಿಡಿಯೊ ವೈರಲ್ ಆಗ್ತಿದೆ.