Bagalkot | ಆಸ್ಪತ್ರೆಗೆ ನುಗ್ಗಿದ ಮಳೆ ನೀರು-ರೋಗಿಗಳ ಪರದಾಟ
Bagalkot | ಆಸ್ಪತ್ರೆಗೆ ನುಗ್ಗಿದ ಮಳೆ ನೀರು
ಬಾಗಲಕೋಟೆ : ಜಿಲ್ಲೆಯಲ್ಲಿ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಮುಧೋಳ ನಗರದ ಶಾರದಾ ಖಾಸಗಿ ಆಸ್ಪತ್ರೆಗೆ ಮಳೆ ನೀರು ನುಗ್ಗಿದೆ.
ಆಸ್ಪತ್ರೆಯ ವಾರ್ಡ್ ನೊಳಗೆ ನೀರು ನುಗ್ಗಿದ್ದು, ಬೆಡ್ ಗಳು ಜಲಾವೃತಗೊಂಡಿದ್ದು ರೋಗಿಗಳು ಪರದಾಟ ನಡೆಸುತ್ತಿದ್ದಾರೆ.
ಹೀಗಾಗಿ ರಾತ್ರೋರಾತ್ರಿ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.

ಮುಧೋಳ ಅಗ್ನಿಶಾಮಕ ದಳ ಸಿಬ್ಬಂದಿ ಮೂಲಕ ರೋಗಿಗಳನ್ನು ಸ್ಥಳಾಂತರ ಮಾಡಲಾಯಿತು.
ಐದು ರೋಗಿಗಳನ್ನು ಇನ್ನೊಂದು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ.
ಮಳೆ ನಿಂತ ಬಳಿಕ ಆಸ್ಪತ್ರೆಯಿಂದ ನೀರು ಹೊರಹಾಕಲಾಗಿದೆ.
ಇದನ್ನೂ ಓದಿ :https://saakshatv.com/heavy-rain-for-n…-north-karnataka/








