ಅಸ್ಸಾಂನಲ್ಲಿ ಸಿಡಿಲು ಬಡಿದು ಬಾಗಲಕೋಟೆ ಮೂಲದ ಯೋಧ ಸಾವು…
ಅಸ್ಸಾಂನಲ್ಲಿ ರಾತ್ರಿ ಸಿಡಿಲು ಬಡಿದು ಬಾಗಲಕೋಟೆ ಮೂಲದ ಬಿಎಸ್‍ಎಫ್ ಯೋಧ ಸಾವನ್ನಪ್ಪಿರುವ ಘಟನೆ ನಡೆದಿದೆ..
41 ವರ್ಷದ ಅಶೋಕ್ ಮುಂಡಾಸ್ ಅವರು ಮೃತ ಬಿಎಸ್‍ಎಫ್ ಯೋಧ. ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ಅಶೋಕ್ ಅವರು ಬಿಎಸ್‍ಎಫ್ 31 ಬಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಸ್ಸಾಂನ ಬಾಂಗ್ಲಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಶನಿವಾರ ರಾತ್ರಿ 12 ಸಮಯದಲ್ಲಿ ಸಿಡಿಲು ಬಡಿದ ರಭಸಕ್ಕೆ ಅಶೋಕ್ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಶೋಕ್ ಅವರು ಬಿಎಸ್‍ಎಫ್‍ನಲ್ಲಿ 16 ವರ್ಷದಿಂದ ಸೇವೆಯಲ್ಲಿದ್ದು, ಈಗ ಪತ್ನಿ, ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಪಾರ್ಥೀವ ಶರೀರ ನಾಳೆ ಬೆಳಗ್ಗೆ ಗ್ರಾಮಕ್ಕೆ ಬರುವ ಸಾಧ್ಯತೆ ಇದೆ.
Bagalkote soldier dies in Assam








