ನವದೆಹಲಿ: ಎನ್ ಐಎ ತಂಡ ಚಾರ್ಜ್ಶೀಟ್ ಸಲ್ಲಿಸುವಲ್ಲಿ ವಿಫಲವಾಗಿರುವ ಹಿನ್ನೆಲೆ ಪುಲ್ವಾಮಾ ದಾಳಿಯ ಆರೋಪಿಗೆ ದೆಹಲಿಯ ಪಟಿಯಾಲ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ನಿಗದಿತ ಸಮಯದೊಳಗೆ ತನಿಖೆ ನಡೆಸಿ ಕೋರ್ಟ್ ಗೆ ಎನ್‌ಐಎ ಅಧಿಕಾರಿಗಳು ಆರೋಪಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿಲ್ಲ. ಬಂಧಿತ ಆರೋಪಿ ಚೋಪನ್ 180 ದಿನಗಳ ಕಸ್ಟಡಿಯಲ್ಲಿದ್ದಾನೆ. ಹೀಗಿದ್ದೂ ಆತನ ವಿರುದ್ಧ ಎನ್‌ಐಎ ಅಧಿಕಾರಿಗಳು ವರದಿ ಸಲ್ಲಿಸಿಲ್ಲ. ಹೀಗಾಗಿ ನ್ಯಾಯಧೀಶ ಪ್ರವೀಣ್ ಸಿಂಗ್, ಆರೋಪಿಗೆ 50 ಸಾವಿರದ ಬಾಂಡ್ ನ ಸ್ಯೂರಿಟಿ ಹಾಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
2019 ಫೆಬ್ರವರಿ 14 ರಂದು ಪುಲ್ವಾಮಾ ಬಳಿಯ ಜಮ್ಮು-ಶ್ರೀನಗರ ಹೈವೇಯಲ್ಲಿ ಸಿಆರ್‌ಪಿಎಫ್ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.