ಕೊರೊನಾ ಚಿಕಿತ್ಸೆಗಾಗಿ ರಾಜ್ಯದಲ್ಲಿ ಸುಮಾರು ಮೂರು ಸಾವಿರ ವೈದ್ಯಕೀಯ ವಿದ್ಯಾರ್ಥಿಗಳನ್ನು ನಿಯೋಜಿಸಲು ಸರ್ಕಾರ ನಿರ್ಧಾರ ಮಾಡಿರುವುದಾಗಿ ಸಚಿವ ಬೈರತಿ ಬಸವರಾಜ್ ಅವರು ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ಅವರು ಮೂರು ವರ್ಷ ಪೂರೈಸಿ ಎಲ್ಲಾ ರೀತಿಯ ತರಬೇತಿ ಪಡೆದು ವೃತ್ತಿಗೆ ನೇಮಕಗೊಳ್ಳಲು ಸಜ್ಜಾಗಿರುವ ಸುಮಾರು ಮೂರು ಸಾವಿರವೈದ್ಯಕೀಯ ವಿದ್ಯಾರ್ಥಿಗಳನ್ನು ಕೊರೊನಾ ಚಿಕಿತ್ಸೆಗಾಗಿ ನೇಮಕ ಮಾಡಿಕೊಳ್ಳುವುದಾಗಿ ಮಾಹಿತಿ ನಿಡಿದ್ದಾರೆ.
ಇದೇ ಡಿಜೆ, ಕೆಜಿ ಹಳ್ಳಿ ಹಿಂಸಾಚಾರ ಪ್ರಕರಣದ ಕುರಿತಾಗಿ ಮಾತನಾಡಿರುವ ಬೈರತಿ ಈ ಘಟನೆ ಪೂರ್ವನಿಯೋಜಿತ. ವಾಟ್ಸಪ್, ಫೋನ್ ಕರೆ ಮೂಲಕ ಒಂದೇ ಸಮಯಕ್ಕೆ ಮೂರ್ನಾಲ್ಕು ಸಾವಿರ ಜನ ಸೇರುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.









