D K Shivakumar | ನನ್ನನ್ನ ಬಂಧಿಸಿ ಎಂದ ಡಿಕೆಶಿಗೆ ಬಿಜೆಪಿ ಟಾಂಗ್
ಬೆಂಗಳೂರು : ನನ್ನನ್ನು ಬಂಧಿಸಿ ಎಂದಿದ್ದ ಕೆಪಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಬಿಜೆಪಿ ಟಾಂಗ್ ನೀಡಿದ್ದು, ಜೈಲು ಹಕ್ಕಿಯ ಅನುಭವ ಇದೆ ಎಂಬ ಕಾರಣಕ್ಕಾಗಿ ಬಂಧಿಸಿ, ಬಂಧಿಸಿ ಎನ್ನುತ್ತಿದ್ದೀರಾ ಎಂದು ಕಾಲೆಳೆದಿದೆ.
“ಹರ್ಷ ಕೊಲೆಯಲ್ಲಿ ಕೆಲವರನ್ನು ಬಂಧಿ ಸಿದ್ದಾರೆ. ಘಟನೆಗೆ ನನ್ನ ಪ್ರಚೋದನೆ ಇದೆ ಎಂದು ಹೇಳುತ್ತಿರುವುದರಿಂದ ನನ್ನನ್ನು ಬಂಧಿಸಲಿ, ಸಚಿವರೇ ನಿಷೇಧಾಜ್ಞೆ ಮುರಿದು ಮೆರವಣಿಗೆ ನಡೆಸಿ ಕಲ್ಲು ಹೊಡೆಸಿದ್ದಾರಲ್ಲ ಅವರ ಮೇಲೆ ಪ್ರಕರಣ ಏಕಿಲ್ಲ. ಇದಕ್ಕೆ ಖಾಕಿ ತೊಟ್ಟವರು ಉತ್ತರಿಸಬೇಕು” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮನ್ನು ತಾವೇ ವಿಜೃಂಭಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ನನ್ನನ್ನು ಬಂಧಿಸಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಡಿಕೆಶಿಯವರೇ ಇದೇನಿದು, ಸಹಾನುಭೂತಿ ಗಿಟ್ಟಿಸಿಕೊಳ್ಳುವ ಹೊಸ ತಂತ್ರವೇ? ಅಥವಾ ಜೈಲು ಹಕ್ಕಿಯ ಅನುಭವ ಇದೆ ಎಂಬ ಕಾರಣಕ್ಕಾಗಿ ಬಂಧಿಸಿ, ಬಂಧಿಸಿ ಎನ್ನುತ್ತಿದ್ದೀರಾ ಎಂದು ವ್ಯಂಗ್ಯವಾಡಿದೆ.
bajrang-dal-worker-murder-case-bjp-and-dk-shivakumar-war









