‘ಅಖಂಡ’ ಥ್ಯಾಂಕ್ಯೂ ಮೀಟ್ ನಲ್ಲಿ ಆಂಧ್ರ ದಿಕ್ಕೆಟ್ಟ ರಾಜ್ಯವಾಗಿದೆ ಎಂದ ಬಾಲಯ್ಯ..!
ತೆಲುಗಿನ ಫಿಯರ್ ಲೆಸ್ ,,, ಡೇರಿಂಗ್ ನಟನಾಗಿಯೇ ,,, ಒಂದು ಫೈಯರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿರುವ ನಟ ನಂದಮುರಿ ಬಾಲಕೃಷ್ಣ.. ಬಾಲಕೃಷ್ಣರಿಗೆ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ.. ಏನೇ ಇರಲಿ ,, ಎಂಥಹ ಪವರ್ ಫುಲ್ ವ್ಯಕ್ತಿಗಳ ವಿರುದ್ಧವೇ ಇರಲಿ , ನೇರ ದಿಟ್ಟವಾಗಿ ಹೇಳಿಕೆ ನೀಡೋರ ಪೈಕಿ ಬಾಲಯ್ಯ ಮುಂಚೂಣಿಯಲ್ಲಿರುವ ನಟ… ಇದೀಗ ಬಾಲಯ್ಯ ಆಂಧ್ರ ಪ್ರದೇಶವನ್ನ ದಿಕ್ಕೆಟ್ಟ ರಾಜ್ಯವಾಗಿದೆ ಎಂದು ಹೇಳುವ ಮೂಲಕ ರಾಜಕೀಯ ಸೂತ್ರಧಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ..
ಹೌದು,.. ಅವರ ಅಖಂಡ ಸಿನಿಮಾ ಭರ್ಜರಿ ಸಕ್ಸಸ್ ಕಂಡ ಬಳಿಕ ಥ್ಯಾಂಕ್ಯೂ ಮೀಟ್ ಏರ್ಪಾಡು ಮಾಡಲಾಗಿತ್ತು.. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಲಯ್ಯ ಆಂಧ್ರ ಪ್ರದೇಶದ ಜಗನ್ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.. ಆದ್ರೆ ಸರ್ಕಾರವನ್ನ ಟೀಕಿಸುವ ಭರದಲ್ಲಿ ಆಂಧ್ರ ಪ್ರದೇಶ ರಾಜ್ಯವನ್ನೇ ಟೀಕಿಸಿದ್ದಾರೆ. ಹೌದು ಹೈದರಾಬಾದ್‌ನಲ್ಲಿ ಮಾತನಾಡಿರುವ ಅವರು ಆಂಧ್ರಪ್ರದೇಶ ರಾಜಧಾನಿಯೇ ಇಲ್ಲದ ದಿಕ್ಕೆಟ್ಟ ರಾಜ್ಯವಾಗಿಬಿಟ್ಟಿದೆ ಎಂದಿದ್ದಾರೆ. ಅಲ್ಲದೇ ಆಂಧ್ರದಲ್ಲಿ ದೇವಾಲಯಗಳ ಮೇಲೆ ದಾಳಿಗಳು ನಡೆಯುತ್ತಿರುವ ವಿಷಯದ ಬಗ್ಗೆ ಹಲವು ವೇದಿಕೆಗಳಲ್ಲಿ ಚರ್ಚೆ ನಡೆದಿದೆ. ಅಖಂಡ ಸಿನಿಮಾ ಮೂಲಕ ಆ ವಿಷಯವನ್ನೂ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ. ಹಿಂದುಪುರ ಶಾಸಕನಾಗಿ, ಪ್ರಜಾ ಪ್ರತಿನಿಧಿಯಾಗಿ ಸಿನಿಮಾ ಮೂಲಕ ನಾನು ನನ್ನ ಪ್ರತಿಭಟನೆ ವ್ಯಕ್ತಪಡಿಸಿದ್ದೇನೆ ಎಂದಿದ್ದಾರೆ.
‘ಗರುಡು ಗಮನ ವೃಷಭ ವಾಹನ’ ಸಿನಿಮಾ ಮೆಚ್ಚಿ ಆಸ್ಕರ್ ಅವಾರ್ಡ್ ವಿನ್ನಿಂಗ್ ಸಿನಿಮಾ ಎಂದ ದೇವ ಕಟ್ಟ..!
ಅಲ್ಲದೇ ಜಾತಿ , ಧರ್ಮ, ಪ್ರದೇಶಗಳ ಹೆಸರಿನಲ್ಲಿ ಜನರನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿವೆ. ಇವುಗಳನ್ನೇ ಆಧಾರವಾಗಿಟ್ಟುಕೊಂಡು ದೌರ್ಜನ್ಯ ನಡೆಸಲಾಗುತ್ತಿದೆ. ಅದಕ್ಕಾಗಿಯೇ ಪ್ರದೇಶಗಳಾಗಿ ವಿಂಗಡಿಸುತ್ತೀರ ಎಂಬ ಡೈಲಾಗ್ ಅನ್ನು ಸಹ ಸಿನಿಮಾದಲ್ಲಿ ಇಟ್ಟಿದ್ದೀವಿ ಎಂದು ಬಾಲಕೃಷ್ಣ ಆಕ್ರೋಶ ಹೊರಹಾಕಿದ್ದಾರೆ.. ಆಂಧ್ರಪ್ರದೇಶ ರಾಜಧಾನಿ ಇಲ್ಲದ ರಾಜ್ಯವಾಗಿಬಿಟ್ಟಿದೆ. ಮೂರು ರಾಜಧಾನಿ ಎಂದು ಸರ್ಕಾರ ಹೇಳುತ್ತಿದೆ. ಅಮರಾವತಿಯೇ ರಾಜ್ಯದ ರಾಜಧಾನಿ ಆಗಬೇಕು ಎಂದು ರೈತರು, ಪ್ರಜೆಗಳು ಹೋರಾಟ ಮಾಡುತ್ತಿದ್ದಾರೆ. ಆಂಧ್ರದ ಪ್ರಸ್ತುತ ಪರಿಸ್ಥಿತಿಯನ್ನು ಟೀಕಿಸುವ ಅನೇಕ ದೃಶ್ಯಗಳು ‘ಅಖಂಡ’ ಸಿನಿಮಾದಲ್ಲಿವೆ ಎಂದಿದ್ದಾರೆ..