ADVERTISEMENT
Tuesday, October 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮೇಳೈಸಿದ ಇಂಡೋನೇಷ್ಯಾದ ಬಾಲಿಯ ಕಲಾ ವೈಭವ;ಸಂಸ್ಕೃತಿಯೇ ಜಾಗತಿಕ ಬೆಸುಗೆ: ಕೇಂದ್ರ ಸಚಿವರ ಶ್ಲಾಘನೆ

admin by admin
October 27, 2026
in Newsbeat, State, ರಾಜ್ಯ
bali-in-bengaluru-cultural-festival-indonesia-kecak-yakshagana

bali-in-bengaluru-cultural-festival-indonesia-kecak-yakshagana

Share on FacebookShare on TwitterShare on WhatsappShare on Telegram

• ಬಾಲಿ–ಬೆಂಗಳೂರು ನಡುವೆ ಸಾಂಸ್ಕೃತಿಕ ಸೇತು
• 16 ದಿನಗಳ ಕಾಲ ನಗರದಲ್ಲಿ ಗರಿಗೆದರಿದ ಕಲಾ ಕಲರವ
• ಸಂಸ್ಕೃತಿಯೇ ಜಾಗತಿಕ ಬೆಸುಗೆ: ಕೇಂದ್ರ ಸಚಿವರ ಶ್ಲಾಘನೆ
• ಕೆಚಕ್‌ನಿಂದ ಯಕ್ಷಗಾನದವರೆಗೆ ಅಪೂರ್ವ ಕಲಾ ಸಂಗಮ

ಬೆಂಗಳೂರು: ಬೆಂಗಳೂರು ಕೇವಲ ಜಾಗತಿಕ ಮಟ್ಟದ ಐಟಿ ನಗರವಷ್ಟೇ ಅಲ್ಲ, ವಿಭಿನ್ನ ಸಂಸ್ಕೃತಿಗಳು, ಕಲೆ ಮತ್ತು ಪರಂಪರೆಗಳು ಒಂದೆಡೆ ಮೇಳೈಸುವ ಜೀವಂತ ತಾಣ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಪರಮ್ ಫೌಂಡೇಷನ್‌ ವತಿಯಿಂದ ಆಯೋಜಿಸಲಾಗಿದ್ದ ‘ಬಾಲಿ ಇನ್‌ ಬೆಂಗಳೂರು’ ಸಾಂಸ್ಕೃತಿಕ ಮಹೋತ್ಸವವು ನಗರದಲ್ಲಿ ಅತ್ಯಂತ ಅದ್ಧೂರಿಯಾಗಿ ಸಂಪನ್ನಗೊಂಡಿದೆ.

Related posts

ಪರಮ್ ವಿಹಾರದಲ್ಲಿ ಅ. 25ರಂದು ಶಾಸ್ತ್ರೀಯ ಸಂಗೀತ, ಭರತನಾಟ್ಯದ ಸೊಬಗು ಅನಾವರಣ

ಪರಮ್ ವಿಹಾರದಲ್ಲಿ ಅ. 25ರಂದು ಶಾಸ್ತ್ರೀಯ ಸಂಗೀತ, ಭರತನಾಟ್ಯದ ಸೊಬಗು ಅನಾವರಣ

October 27, 2026
shakti-utsava-digital-dasara-jayanagar-history-technology-exhibition

ಜಯನಗರದ ‘ಶಕ್ತಿ ಉತ್ಸವ’ ಡಿಜಿಟಲ್ ದಸರಾ ವೈಭವಕ್ಕೆ ಅಭೂತಪೂರ್ವ ಯಶಸ್ಸು: ಸಾರ್ವಜನಿಕರ ಮನಗೆದ್ದ ಇತಿಹಾಸ ಮತ್ತು ತಂತ್ರಜ್ಞಾನದ ಸಮ್ಮಿಲನ

October 27, 2026

ಈ ಮಹೋತ್ಸವಕ್ಕೆ ವಿಡಿಯೊ ಸಂದೇಶದ ಮೂಲಕ ಶುಭ ಹಾರೈಸಿ ಮಾತನಾಡಿದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, “ಕಲೆ ಮತ್ತು ಸಂಸ್ಕೃತಿಗೆ ಭಾಷೆ ಹಾಗೂ ಭೌಗೋಳಿಕ ಗಡಿಗಳನ್ನು ಮೀರಿ ಜನರನ್ನು ಒಗ್ಗೂಡಿಸುವ ಅಪಾರ ಶಕ್ತಿಯಿದೆ. ವಿಶ್ವದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಪರಸ್ಪರ ಸಾಂಸ್ಕೃತಿಕ ವಿನಿಮಯವು ಅಂತರವನ್ನು ಕಡಿಮೆ ಮಾಡಿ, ಆರೋಗ್ಯಕರ ಸಂವಾದದ ವಾತಾವರಣ ನಿರ್ಮಿಸುತ್ತದೆ. ಭಾರತ ಮತ್ತು ಇಂಡೋನೇಷ್ಯಾದ ನಡುವಿನ ಪ್ರಾಚೀನ ನಾಗರಿಕತೆಯ ಪರಂಪರೆಯನ್ನು ಈ ಉತ್ಸವವು ಮತ್ತಷ್ಟು ಹತ್ತಿರ ತಂದಿದ್ದು, ಉಭಯ ದೇಶಗಳ ಕಲಾವಿದರು ಹಾಗೂ ಕಲಾಪ್ರೇಮಿಗಳಿಗೆ ಇದೊಂದು ಅವಿಸ್ಮರಣೀಯ ಅನುಭವವಾಗಿದೆ” ಎಂದು ಶ್ಲಾಘಿಸಿದರು.

ಅಕ್ಟೋಬರ್‌ 3ರಿಂದ 18ರವರೆಗೆ ಒಟ್ಟು 16 ದಿನಗಳ ಕಾಲ ನಗರದ 14 ಪ್ರಮುಖ ಸ್ಥಳಗಳಲ್ಲಿ 16 ವೈವಿಧ್ಯಮಯ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ಕಲಾ ಪ್ರದರ್ಶನಗಳ ಜತೆಗೆ ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಉಪನ್ಯಾಸ ಮತ್ತು ಕಲಾವಿದರೊಂದಿಗಿನ ನೇರ ಸಂವಾದಗಳು ಕಲಾಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿದವು.

ಭಾರತ ಮತ್ತು ಇಂಡೋನೇಷ್ಯಾ ನಡುವಿನ ಪ್ರಾಚೀನ ಸಾಂಸ್ಕೃತಿಕ ಸಾಮ್ಯತೆ, ರಾಮಾಯಣ ಆಧಾರಿತ ಪುರಾಣ ಕಥನಗಳು ಹಾಗೂ ಉಭಯ ದೇಶಗಳ ಕಲಾ ಸಂಬಂಧಗಳನ್ನು ಮರುಶೋಧಿಸುವ ಸೃಜನಶೀಲ ವಿನಿಮಯಕ್ಕೆ ಈ ವೇದಿಕೆ ಸಾಕ್ಷಿಯಾಯಿತು.

ಬಾಲಿಯಿಂದ ಬೆಂಗಳೂರಿಗೆ ಕಲೆಯ ಪಯಣ:
ಉತ್ಸವದ ಪ್ರಮುಖ ಆಕರ್ಷಣೆಯಾಗಿ ಬಾಲಿಯ ವಿಶ್ವವಿಖ್ಯಾತ ‘ಕೆಚಕ್’ (Kecak) ಪ್ರದರ್ಶನ ಕಲಾಪ್ರೇಮಿಗಳ ಮನಗೆದ್ದಿತು. ಪದ್ಮಶ್ರೀ ಪುರಸ್ಕೃತ ಡಾ. ಐ. ವಯಾನ್ ಡಿಬಿಯಾ ಹಾಗೂ ಅವರ ಪರಿಣಿತ ಕಲಾವಿದರ ತಂಡವು ನಗರಕ್ಕೆ ಆಗಮಿಸಿ, ಬಾಲಿಯ ಪ್ರದರ್ಶನ ಕಲೆಗಳ ಕುರಿತ ತಮ್ಮ ದಶಕಗಳ ಅನುಭವ ಮತ್ತು ಜ್ಞಾನವನ್ನು ಬೆಂಗಳೂರಿನ ಕಲಾಸಕ್ತರೊಂದಿಗೆ ಹಂಚಿಕೊಂಡರು. ಬಾಲಿ ನೃತ್ಯದ ಸೂಕ್ಷ್ಮ ಹಾವಭಾವಗಳು, ಹೆಜ್ಜೆಗಳ ಲಯ ಮತ್ತು ಕಥನ ಶೈಲಿಯ ಆಂತರ್ಯವನ್ನು ಕಾರ್ಯಾಗಾರಗಳ ಮೂಲಕ ಆಸಕ್ತರಿಗೆ ಪರಿಚಯಿಸಲಾಯಿತು.

ಕೆಚಕ್‌ನಿಂದ ಗಮೆಲಾನ್‌ವರೆಗೆ ಅದ್ಭುತ ಲೋಕ:
ಬಾಲಿಯ ಸಾಂಪ್ರದಾಯಿಕ ‘ಗಮೆಲಾನ್‌’ ಸಂಗೀತ ಕಾರ್ಯಾಗಾರ, ಮುಖವಾಡ ತಯಾರಿಕೆ ಕಮ್ಮಟ, ನೃತ್ಯ ಚಲನೆಯ ತರಬೇತಿ ಹಾಗೂ ಇಂಡೋನೇಷ್ಯಾದ ಸಾಂಪ್ರದಾಯಿಕ ‘ವಾಯಾಂಗ್’ ತೊಗಲುಗೊಂಬೆಯಾಟದ ಪ್ರಾತ್ಯಕ್ಷಿಕೆಗಳು ಉತ್ಸವದ ಮೆರುಗನ್ನು ಹೆಚ್ಚಿಸಿದವು. ವಿಶೇಷವಾಗಿ, ಇಂಡೋನೇಷ್ಯಾ ಮತ್ತು ಭಾರತದ ತೊಗಲುಗೊಂಬೆಯಾಟಗಳ ಜಂಟಿ ಪ್ರದರ್ಶನ ಹಾಗೂ ಬಾಲಿಯ ಕಲೆಯನ್ನು ಕರುನಾಡಿನ ಹೆಮ್ಮೆಯ ಯಕ್ಷಗಾನದೊಂದಿಗೆ ಬೆಸೆದ ಅಪೂರ್ವ ಸಹಯೋಗವು ನೋಡುಗರ ಕಣ್ಮನ ಸೆಳೆಯಿತು. ಒಂದೆಡೆ ಬಾಲಿಯ ಕೆಚಕ್‌ನ ಲಯ, ಮತ್ತೊಂದೆಡೆ ಯಕ್ಷಗಾನದ ಹೆಜ್ಜೆಗಳ ಸಂಗಮವು ಕಲಾತ್ಮಕ ಸಂವಾದಕ್ಕೆ ಹೊಸ ಭಾಷ್ಯ ಬರೆಯಿತು.

ಸಂವಾದ ಮತ್ತು ಕಲಿಕೆಯ ಸಂಗಮ:
‘ಬಾಲಿ ಇನ್‌ ಬೆಂಗಳೂರು’ ಉತ್ಸವವು ಕೇವಲ ವೇದಿಕೆಯ ಪ್ರದರ್ಶನಗಳಿಗೆ ಸೀಮಿತವಾಗದೆ ಕಲಿಕೆ, ಸಹಯೋಗ ಮತ್ತು ಸಂವಾದದ ಮೂಲಕ ಜನರ ನಡುವೆ ಬೆಸುಗೆಯಾಗಿ ಕಾರ್ಯನಿರ್ವಹಿಸಿತು. ಬಾಲಿಯ ಕಲಾವಿದರು, ಭಾರತೀಯ ರಂಗಕರ್ಮಿಗಳು, ವಿದ್ಯಾರ್ಥಿಗಳು ಮತ್ತು ಕಲಾ ಸಂಶೋಧಕರು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿ ಅನುಭವ ಹಂಚಿಕೊಂಡರು. ಆಹಾರ, ಸಂಸ್ಕೃತಿ ಮತ್ತು ಕಲಾ ಸಮನ್ವಯದೊಂದಿಗೆ ಈ ಮಹೋತ್ಸವವು ಬೆಂಗಳೂರಿನ ಸಾಂಸ್ಕೃತಿಕ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಿ ಯಶಸ್ವಿಯಾಗಿ ದಾಖಲಾಯಿತು.

ShareTweetSendShare
Join us on:

Related Posts

ಪರಮ್ ವಿಹಾರದಲ್ಲಿ ಅ. 25ರಂದು ಶಾಸ್ತ್ರೀಯ ಸಂಗೀತ, ಭರತನಾಟ್ಯದ ಸೊಬಗು ಅನಾವರಣ

ಪರಮ್ ವಿಹಾರದಲ್ಲಿ ಅ. 25ರಂದು ಶಾಸ್ತ್ರೀಯ ಸಂಗೀತ, ಭರತನಾಟ್ಯದ ಸೊಬಗು ಅನಾವರಣ

by admin
October 27, 2026
0

ಬೆಂಗಳೂರು: ಪರಮ್ ಕಲ್ಚರ್ ವತಿಯಿಂದ ಆಯೋಜಿಸಲಾಗುವ ಮಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾದ ‘ಪರಮ್ ವಿಹಾರ’ದ 17ನೇ ಆವೃತ್ತಿಯು ಅಕ್ಟೋಬರ್ 25ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಬೆಂಗಳೂರಿನ ಬನಶಂಕರಿಯಲ್ಲಿರುವ...

shakti-utsava-digital-dasara-jayanagar-history-technology-exhibition

ಜಯನಗರದ ‘ಶಕ್ತಿ ಉತ್ಸವ’ ಡಿಜಿಟಲ್ ದಸರಾ ವೈಭವಕ್ಕೆ ಅಭೂತಪೂರ್ವ ಯಶಸ್ಸು: ಸಾರ್ವಜನಿಕರ ಮನಗೆದ್ದ ಇತಿಹಾಸ ಮತ್ತು ತಂತ್ರಜ್ಞಾನದ ಸಮ್ಮಿಲನ

by admin
October 27, 2026
0

ಬೆಂಗಳೂರು: ನಗರದ ಜಯನಗರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿದ ವಿನೂತನ ‘ಶಕ್ತಿ ಉತ್ಸವ’ ಡಿಜಿಟಲ್ ದಸರಾ ಪ್ರದರ್ಶನವು ಸಾರ್ವಜನಿಕರ ಹಾಗೂ ಪ್ರಮುಖವಾಗಿ ಯುವ ಪೀಳಿಗೆಯ ಅಪಾರ ಪ್ರಶಂಸೆಗೆ ಪಾತ್ರವಾಗುವ...

jio-platforms-ipo-record-7-40-lakh-crore-bids-22-19-times-subscription

ಸ್ಟಾಕ್ ಮಾರುಕಟ್ಟೆಯಲ್ಲಿ ಅಚ್ಚರಿ ಮೂಡಿಸಿದ ಜಿಯೋ ಐಪಿಒ: ದಾಖಲೆಯ ₹7.40 ಲಕ್ಷ ಕೋಟಿ ಬೇಡಿಕೆ

by admin
October 27, 2026
0

* ಈ ​ಹಿಂದಿನ ಐಪಿಒ ಬಿಡ್ಡಿಂಗ್ ದಾಖಲೆಯನ್ನು ₹47,000 ಕೋಟಿಗಳಿಂದ ಹಿಂದಿಕ್ಕಿದ ಜಿಯೋ ಐಪಿಒ * ದೊಡ್ಡ ಸಾಂಸ್ಥಿಕ ಹೂಡಿಕೆದಾರರಿಂದ ಸುಮಾರು ₹3.87 ಲಕ್ಷ ಕೋಟಿ ಮೌಲ್ಯದ...

kieron-pollard-appointed-mumbai-indians-head-coach-2026

ಮುಂಬೈ ಇಂಡಿಯನ್ಸ್ಗೆ ಕೀರನ್ ಪೊಲಾರ್ಡ್ ನೂತನ ಮುಖ್ಯ ಕೋಚ್

by admin
October 27, 2026
0

* ಆಟಗಾರನಿಂದ ಮುಖ್ಯ ತರಬೇತುದಾರನವರೆಗೆ: 16 ವರ್ಷಗಳ ಬಾಂಧವ್ಯಕ್ಕೆ ಹೊಸ ಅಧ್ಯಾಯ ಮುಂಬೈ, : ಕೀರನ್ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನೂತನ ಮುಖ್ಯ ಕೋಚ್...

jio-platforms-ipo-record-7-40-lakh-crore-bids-1-38-crore-applications

ಜಿಯೋ ಐಪಿಒಗೆ 7.40 ಲಕ್ಷ ಕೋಟಿ ರೂಪಾಯಿಯಷ್ಟು ಬಿಡ್‌; ಅರ್ಜಿಗಳ ಸಂಖ್ಯೆಯಲ್ಲಿ ವಿಶ್ವ ದಾಖಲೆ

by admin
October 27, 2026
0

ಮುಂಬೈ, - ಭಾರತದ ಅತಿದೊಡ್ಡ ಐಪಿಒ ಎಂಬ ಐತಿಹಾಸಿಕ ದಾಖಲೆಯೊಂದಿಗೆ ಜಿಯೋ ಪ್ಲಾಟ್ ಫಾರ್ಮ್ಸ್ ಐಪಿಒ ಮುಕ್ತಾಯವಾಗಿದ್ದು, ಆ್ಯಂಕರ್ ಬೇಡಿಕೆ ಸೇರಿದಂತೆ ಒಟ್ಟು ಸುಮಾರು ₹7.40 ಲಕ್ಷ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram