Ballary | ಹೈಪ್ರೊಫೈಲ್ ವರದಕ್ಷಿಣೆ ವಂಚನೆ ಪ್ರಕರಣ ಬೆಳಕಿಗೆ!
1 ಕೆಜಿ ಚಿನ್ನ ಕೊಟ್ಟರೂ ಹಣ ಬೇಕೆಂದು ಬೇಡಿಕೆ
ಹೈದರಾಬಾದ್ ವೈದ್ಯೆಗೆ ರಘುರಾಮ ರೆಡ್ಡಿ ವಂಚನೆ
ಬಳ್ಳಾರಿ ಮೂಲದ ರಘರಾಮ ರೆಡ್ಡಿಯಿಂದ ವಂಚನೆ
ಪ್ರಕರಣ ಸಂಬಂಧ ಪೊಲೀಸರಿಂದ ಮೂವರ ಬಂಧನ
ಬಳ್ಳಾರಿ : ಗಣಿ ಜಿಲ್ಲೆಯಲ್ಲಿ ಹೈಪ್ರೊಫೈಲ್ ವರದಕ್ಷಿಣೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಬಳ್ಳಾರಿ ಮೂಲದ ರಘುರಾಮ ರೆಡ್ಡಿ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು ಹೈದರಾಬಾದ್ ಮೂಲದ ಡಾಕ್ಟರ್ ಮೌನಿಕಾ ಎಂಬುವರನ್ನ 2019 ರಲ್ಲಿ ಮದುವೆಯಾಗಿದ್ದ.
ಮದುವೆ ವೇಳೆ ಐವತ್ತು ಲಕ್ಷ ರುಪಾಯಿ ವರದಕ್ಷಿಣೆ, ಒಂದು ಕೆ.ಜಿ. ಬಂಗಾರವನ್ನು ನೀಡಲಾಗಿತ್ತು.
ಆದ್ರೆ ಎರಡು ತಿಂಗಳು ಕೂಡ ಹೆಂಡತಿಜೊತೆ ಇರದ ರಘುರಾಮ್ ರೆಡ್ಡಿ, ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ.
ಈ ವೇಳೆ ರಾಘುರಾಮ ರೆಡ್ಡಿ ಯಾವುದೇ ಕೆಲಸ ಮಾಡುತ್ತಿಲ್ಲ ಎಂಬೋದು ತಿಳಿದುಬಂದಿದೆ.
ವರದಕ್ಷಿಣೆಗಾಗಿ ಕಿರುಕುಳ ಹೆಚ್ಚಾದ ಕಾರಣ ವೈದ್ಯೆ ಮನೆಯಿಂದ ಹೊರ ಬಂದಿದ್ದರು.
ಆದ್ರೆ ಇದೀಗ ರಘುರಾಮ್ ವಿಚ್ಛೇದನೆ ಪಡೆಯದೇ ಮತ್ತೊಬ್ಬರನ್ನು ಮದುವೆಯಾಗಿದ್ದಾನೆ.
ಇದನ್ನು ಪ್ರಶ್ನಿಸಲು ಬಂದ ಮೊದಲ ಹೆಂಡತಿ ಮತ್ತವರ ಮನೆಯವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ.
ಈ ಸಂಬಂಧ ವೈದ್ಯೆ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ರಘುರಾಮ ರೆಡ್ಡಿ, ತಂದೆ ನಾಗೀರೆಡ್ಡಿ, ಸಹೋದರ ಹರೀಶ್ ರೆಡ್ಡಿಯನ್ನ ಪೊಲೀಸರುಬಂಧಿಸಿದ್ದಾರೆ.