BAN v IND 2nd Test : ಕುಲ್ದೀಪ್ ಡ್ರಾಪ್ ಔಟ್ , ನಂಬಲಸಾಧ್ಯ – ಸುನೀಲ್ ಗವಾಸ್ಕರ್
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಕುಲ್ದೀಪ್ ಯಾದವ್ ಅವರನ್ನ ತಂಡದಿಂದ ಕೈಬಿಟ್ಟಿರುವ ಬಗ್ಗೆ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಸಹ ಈ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ʼಪಂದ್ಯ ಶ್ರೇಷ್ಠʼ ಪ್ರಶಸ್ತಿ ಪಡೆದ ಆಟಗಾರನನ್ನ ಕೈಬಿಟ್ಟಿರುವುದು ನಂಬಲಸಾಧ್ಯʼ ಎಂಬುದನ್ನ ಸಹಜವಾಗಿ ಹೇಳಬಹುದು. ಆದರೆ ಪ್ರಥಮ ಟೆಸ್ಟ್‌ನಲ್ಲಿ ಎಂಟು ವಿಕೆಟ್‌ಗಳನ್ನು ಪಡೆದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಪಡೆದ ಆಟಗಾರನ್ನ ತಂಡದಿಂದ ಕೈಬಿಟ್ಟಿರುವುದು ನಂಬಲಾಗದ ಸಂಗತಿ.
ತಂಡದಲ್ಲಿ ನಿಮಗೆ ಇನ್ನೂ ಇಬ್ಬರು ಸ್ಪಿನ್ನರ್‌ಗಳಿದ್ದರು, ಇವರಿಬ್ಬರಲ್ಲಿ ಒಬ್ಬರನ್ನು ಡ್ರಾಪ್ ಮಾಡಬಹುದಿತ್ತು. ಆದರೆ ಎಂಟು ವಿಕೆಟ್‌ಗಳನ್ನು ಕಬಳಿಸಿದ ಆಟಗಾರನನ್ನ ಗೌರವದಿಂದ ಆಡಿಸಬೇಕಿತ್ತು ಎಂದು ಗವಾಸ್ಕರ್ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ತಿಳಿಸಿದರು.
ಕಠಿಣ ನಿರ್ಧಾರವಾಗಿದೆ:
ಕುಲ್ದೀಪ್ ಯಾದವ್ ಅವರನ್ನ ಪ್ಲೇಯಿಂಗ್ ಇಲವೆನ್‌ನಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿದೆ ಎಂದು ಭಾರತ ತಂಡದ ನಾಯಕ ಕೆಎಲ್ ರಾಹುಲ್ ತಿಳಿಸಿದ್ದಾರೆ. ಟಾಸ್ ವೇಳೆ ಮಾತನಾಡಿದ ಅವರು, ಕುಲ್ದೀಪ್ ಅವರನ್ನ ತಂಡದಿಂದ ಬಿಟ್ಟಿರುವುದು ಕಠಿಣ ನಿರ್ಧಾರವಾಗಿದೆ. ಆದರೆ ಅಶ್ವಿನ್ ಮತ್ತು ಅಕ್ಸರ್ ಪಟೇಲ್ ಸ್ಪಿನ್ ಮಾಡಬಲ್ಲರು, ಇದರಿಂದಾಗಿ ಕುಲ್ದೀಪ್ ಬದಲಿಗೆ ಉನಾದ್ಕಟ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದು ಉನಾದ್ಕಟ್ ಅವರಿಗೆ ಸಿಗುತ್ತಿರುವ ಉತ್ತಮ
ಅವಕಾಶವಾಗಿದೆ ಎಂದರು.
ಮೊದಲ ಟೆಸ್ಟ್‌ನಲ್ಲಿ ಕುಲ್ದೀಪ್ ಯಾದವ್ ಆಲ್ರೌಂಡ್ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಉಪಯುಕ್ತ 40 ರನ್‌ಗಳಿಸಿದ್ದ ಕುಲ್ದೀಪ್, 5 ವಿಕೆಟ್ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಅಲ್ಲದೇ ಎರಡನೇ ಇನ್ನಿಂಗ್ಸ್‌ನಲ್ಲೂ ಸಹ 3 ವಿಕೆಟ್ ಪಡೆದಿದ್ದರು. ಪರಿಣಾಮ ಮೊದಲ ಟೆಸ್ಟ್‌ನಲ್ಲಿ ಭಾರತ 188 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಅಲ್ಲದೇ ಆಲ್ರೌಂಡ್ ಪ್ರದರ್ಶನ ನೀಡಿದ್ದ ಕುಲ್ದೀಪ್, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಸಹ ಪಡೆದಿದ್ದರು.