ಬಾಳೆ ದಿಂಡಿನ ಮಜ್ಜಿಗೆ ಆರೋಗ್ಯಕರ ಮತ್ತು ಪೌಷ್ಟಿಕತೆಭರಿತ ಪಾನೀಯವಾಗಿದೆ, ವಿಶೇಷವಾಗಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಇರುವವರಿಗೆ ಬಾಳೆ ದಿಂಡಿನ ಮಜ್ಜಿಗೆ ಅತ್ಯುತ್ತಮವಾಗಿದೆ. ಬಾಳೆ ದಿಂಡು ನಾರಿನಂಶ ಮತ್ತು ಅಗತ್ಯ ಖನಿಜಾಂಶಗಳನ್ನು ಹೊಂದಿರುವುದರಿಂದ ದೇಹವನ್ನು ಶುದ್ಧೀಕರಿಸಲು ಮತ್ತು ಆರೋಗ್ಯವನ್ನು ಹೆಚ್ಚಿಸಲು ಸಹಾಯಕವಾಗಿದೆ.
ಬಾಳೆ ದಿಂಡಿನ ಮಜ್ಜಿಗೆ ತಯಾರಿಸುವ ವಿಧಾನ:
ಬೇಕಾಗುವ ಸಾಮಗ್ರಿಗಳು:
ಬಾಳೆ ದಿಂಡು (ಕಟ್ ಮಾಡಿರೋದು) – 1/2 ಕಪ್
ಮೊಸರು – 1/2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಜೀರಿಗೆ ಪುಡಿ – 1/2 ಚಮಚ
ಗಾಂಧಾರಿ ಮೆಣಸು ಅಥವಾ ಹಸಿಮೆಣಸಿನಕಾಯಿ – 1
ಮಾಡುವ ವಿಧಾನ:
1. ಬಾಳೆ ದಿಂಡನ್ನು ಸಣ್ಣ ತುಂಡುಗಳಿಗೆ ಕಟ್ ಮಾಡಿ.
2. ಅದಕ್ಕೆ ಮೊಸರು, ಉಪ್ಪು, ಗಾಂಧಾರಿ ಮೆಣಸು ಮತ್ತು ಜೀರಿಗೆ ಪುಡಿ ಸೇರಿಸಿ.
3. ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.
4. ತಯಾರಾದ ಮಿಶ್ರಣವನ್ನು ಶೋಧಿಸಿ.
5. ಮಜ್ಜಿಗೆಯನ್ನು ಗ್ಲಾಸಿಗೆ ಹೊಯ್ಯಿದು, ಮೇಲೆ ಸ್ವಲ್ಪ ಜೀರಿಗೆ ಪುಡಿ ಉದುರಿಸಿ.
6. ಬೆಳಗಿನ ಜಾವ ಖಾಲಿ ಹೊಟ್ಟೆಗೆ ಕುಡಿಯಲು ಇದು ಅತ್ಯುತ್ತಮ.
ಆರೋಗ್ಯದ ಪ್ರಯೋಜನಗಳು:
1. ಮೂತ್ರಪಿಂಡದ ಕಲ್ಲುಗಳು: ದಿಂಡಿನ ನಾರಿನಂಶ ಮೂತ್ರಪಿಂಡವನ್ನು ಶುದ್ಧೀಕರಿಸಿ, ಕಲ್ಲುಗಳ ಗಾತ್ರವನ್ನು ಕಡಿಮೆ ಮಾಡುತ್ತದೆ.
2. ಬೊಜ್ಜು ಕರಗುವುದು: ಇದು ದೇಹದ ಮೆಟಾಬಾಲಿಸಂ ಹೆಚ್ಚಿಸಿ ತೂಕ ಕಡಿಮೆ ಮಾಡಲು ಸಹಾಯಕವಾಗಿದೆ.
3. ಜೀರ್ಣಕ್ರಿಯೆ ಸುಧಾರಣೆ: ಮೊಸರು ಮತ್ತು ಜೀರಿಗೆ ಪುಡಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
4. ದೇಹದ ಡಿಟಾಕ್ಸ್: ಬಾಳೆ ದಿಂಡು ದೇಹವನ್ನು ಟಾಕ್ಸಿನ್‌ಗಳಿಂದ ಮುಕ್ತಗೊಳಿಸುತ್ತದೆ.
ನಿತ್ಯ ಸೇವನೆಯೊಂದಿಗೆ, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿ ಉತ್ತಮ ಫಲಿತಾಂಶಗಳನ್ನು ಪಡೆಯಿರಿ