ಬಂದ್ ಪ್ರಚಾರಕ್ಕೆ ಸೀಮಿತವಾಗಬಾರದು : ನಿಖಿಲ್ Nikhil saaksha tv
ಕೋಲಾರ : ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಇದೇ ಡಿಸೆಂಬರ್ 31 ಕ್ಕೆ ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿವೆ. ಇದಕ್ಕೆ ನಿಖಿಲ್ ಕುಮಾರಸ್ವಾಮಿ ಬೆಂಬಲ ಸೂಚಿಸಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್, ಬಂದ್ ಮಾಡೋದ್ರಿಂದ ಪ್ರಯೋಜ ಹಾಗೋದಿದ್ರೆ ಮಾಡ್ಲಿ, ಬಂದ್ ಸುಮ್ಮನೆ ಮಾಧ್ಯಮದಲ್ಲಿ ಪ್ರಚಾರ ಪಡೆದುಕೊಳ್ಳಲು ಸೀಮಿತವಾಗಬಾರದು ಎಂದು ಹೇಳಿದರು.
ಇನ್ನು ಕನ್ನಡ ಪರ ಸಂಘಟನೆ ಕರೆ ನೀಡಿರುವ ಬಂದ್ ಗೆ ಅವರ ಪರ ನಾವು ನಿಂತು ಕೊಳ್ಳುತ್ತೇವೆ.
ಬಂದ್ ಮಾಡೋದ್ರಿಂದ ಸಮಾಜದಲ್ಲಿ ಪರಿವರ್ತಯಾಗಬೇಕು . ಬಂದ್ ಮಾಡಬೇಕು ಅಂತ ಮಾಡಿದ್ರೆ ಪ್ರಯೋಜನ ಹಾಗೋದಿಲ್ಲ ಎಂದಿದ್ದಾರೆ ನಿಖಿಲ್.









