Bangalore | ಕನಿಷ್ಠ ಕಾಮನ್ ಸೆನ್ಸ್ ಇಲ್ಲದ ಸಿಎಂ
ಬೆಂಗಳೂರು : ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ರಾಜ್ಯ ಬಿಜೆಪಿ ಘಟಕ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಘಟಕ ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದೆ.
ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ.. ನಾನು ಸಿಎಂ ಅಲ್ಲ ‘ಕಾಮನ್ ಮ್ಯಾನ್’ ಎಂದಿದ್ದರು ಬಸವರಾಜ ಬೊಮ್ಮಾಯಿ ಅವರು. ಆದರೆ 2,500 ಕೋಟಿ ಬೆಲೆ ಬಾಳುವ ಕಾಮನ್ ಮ್ಯಾನ್ ಎನ್ನುವುದನ್ನು ಹೇಳಿರಲೇ ಇಲ್ಲ. ಅದನ್ನು ಹೇಳಲು ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಬರಬೇಕಾಯ್ತು! ಕಾಮನ್ ಮ್ಯಾನ್ನ ಸಮಸ್ಯೆಗಳ ಬಗ್ಗೆ ಕನಿಷ್ಠ ಕಾಮನ್ ಸೆನ್ಸ್ ಇಲ್ಲದ ಸಿಎಂ #BJPBrashtotsava ನಡೆಸುತ್ತಿರುವುದು ರಾಜ್ಯದ ದುರಂತ.
ಬಿಜೆಪಿ ವರ್ಸಸ್ ಬಿಜೆಪಿ ತಿಕ್ಕಾಟದ ಪ್ರಮುಖ ಹಂತವೇ ನಾಯಕತ್ವ ಬದಲಾವಣೆ, ಬಿಜೆಪಿಗೆ ಎಂದೂ ಸುಭದ್ರ, ಸುಸ್ಥಿರ ಆಡಳಿತ ನೀಡುವ ಅಭ್ಯಾಸವೇ ಇಲ್ಲ. ಬಿಜೆಪಿ ಆಡಳಿತವೆಂದರೆ ಸಿಎಂ ಬದಲಾವಣೆ ಸಂಪ್ರದಾಯ ಎಂಬಂತಾಗಿದೆ. ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಮಿತಿ ಮೀರಿದ್ದ ಭ್ರಷ್ಟಾಚಾರ ಸಿಎಂ ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ಉತ್ತುಂಗಕ್ಕೇರಿದೆ.
#BJPvsBJP ಕಿತ್ತಾಟದಲ್ಲಿರುವ ಬಿಜೆಪಿ ಸರ್ಕಾರದಲ್ಲಿ ಸಾಮರಸ್ಯವೂ ಇಲ್ಲ, ಸಮನ್ವಯತೆಯೂ ಇಲ್ಲ.
ಮಕ್ಕಳ ಶಿಕ್ಷಣ ಹಾಗೂ ಅವರ ಭವಿಷ್ಯದ ವಿಷಯದಲ್ಲಿ 'ಮಕ್ಕಳಾಟ' ಆಡುತ್ತಿರುವ ಸರ್ಕಾರದಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಬಗೆಯ ಧೋರಣೆ.
ಶೂ, ಸಾಕ್ಸ್ ನೀಡುವುದರಲ್ಲಿ ಸರ್ಕಾರದ ಇಬ್ಬಂಧಿ ನೀತಿಯೇ ಇದಕ್ಕೆ ಉದಾಹರಣೆ.#BJPBrashtotsava pic.twitter.com/k5svKDnScA
— Karnataka Congress (@INCKarnataka) July 27, 2022
ರಾಜ್ಯದ ಸಮಸ್ಯೆಗಳಿಗೆ ‘ಆಕ್ಷನ್’ ಬಡವರ ನೋವಿಗೆ ‘ರಿಯಾಕ್ಷನ್’ ತೋರಬೇಕಿತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು, ಆದರೆ ಸಮಾಜಘಾತುಕರಿಗೆ ‘ಆಕ್ಷನ್ಗೆ ರಿಯಕ್ಷನ್’ ಎಂದು ಕುಮ್ಮಕ್ಕು ನೀಡಿದ ಪರಿಣಾಮ ಇಂದು ರಾಜ್ಯದಲ್ಲಿ ದ್ವೇಷ ತಾಂಡವವಾಡುತ್ತಿದೆ. ಹಾಲಿ ಸಿಎಂ ಧೋರಣೆಯನ್ನು ಮಾಜಿ ಸಿಎಂ ಖಂಡಿಸಿ ಶಿಷ್ಯನ ವಿರುದ್ಧ ಕಿಡಿಕಾರಿದ್ದರು.
#PSIScam ಬಯಲಾದಾಗ, ಇಂದಿನ ಗೃಹಸಚಿವರು ‘ಅಕ್ರಮವೇ ನಡೆದಿಲ್ಲ’ ಎಂದು ಸಮರ್ಥಿಸಿದ್ದರು. ಅಂದಿನ ಗೃಹಸಚಿವರು, ಅರ್ಥಾತ್ ಇಂದಿನ ಸಿಎಂ ಮುಗುಮ್ಮಾಗಿ ಕುಳಿತಿದ್ದರು! ಅವರದ್ದೇ ಪಕ್ಷದ ಯತ್ನಾಳ್ರವರು ‘ಮಾಜಿ ಸಿಎಂ ಪುತ್ರ’ನ ಕಡೆ ಬೆರಳು ತೋರಿಸಿದರು. ಅವರು ಹೇಳಿದಂತೆ ಆ ಮಾಜಿ ಸಿಎಂ ಪುತ್ರ ಯಾರೆಂದು ತನಿಖೆ ಮಾಡಲಿಲ್ಲವೇಕೆ ಎಂದು ಪ್ರಶ್ನಿಸಿದೆ.








