Bharat Jodo | ಭಾರತ್ ಜೋಡೋ ಯಾತ್ರೆಯಲ್ಲಿ ದೇಶ ವಿರೋಧಿ ಶಕ್ತಿಗಳು
ಬೆಂಗಳೂರು : ಭಾರತ್ ಜೋಡೋ ಯಾತ್ರೆಯಲ್ಲಿ ದೇಶ ವಿರೋಧಿ ಶಕ್ತಿಗಳು ಜೊತೆಯಾಗಿವೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಅಭಿಯಾನ ಹಮ್ಮಿಕೊಂಡಿದ್ದಾರೆ. ಕನ್ಯಾಕುಮಾರಿಯಿಂದ ಆರಂಭವಾಗಿರುವ ಭಾರತ್ ಜೋಡೋ ಸದ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಭಾರತ್ ಜೋಡೋ ಯಾತ್ರೆಯಲ್ಲಿ ದೇಶ ವಿರೋಧಿ ಶಕ್ತಿಗಳು ಜೊತೆಯಾಗಿವೆ. ಭಾರತವನ್ನು ತುಂಡು ಮಾಡುತ್ತೇವೆ ಎಂದು ಸಂಕಲ್ಪ ತೊಟ್ಟಿರುವ ಕನ್ನಯ್ಯ, ರಾಹುಲ್ ಗಾಂಧಿಯ ಯಾತ್ರೆಯಲ್ಲಿ ಸಾಗುತ್ತಿದ್ದಾನೆ. ಇದು #ParivarJodoYatra ಯೋ ಅಥವಾ ದೇಶದ್ರೋಹಿಗಳ ಯಾತ್ರೆಯೋ ಎಂದು ಪ್ರಶ್ನಿಸಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ದೇಶ ವಿರೋಧಿ ಶಕ್ತಿಗಳು ಜೊತೆಯಾಗಿವೆ.
ಭಾರತವನ್ನು ತುಂಡು ಮಾಡುತ್ತೇವೆ ಎಂದು ಸಂಕಲ್ಪ ತೊಟ್ಟಿರುವ ಕನ್ನಯ್ಯ, ರಾಹುಲ್ ಗಾಂಧಿಯ ಯಾತ್ರೆಯಲ್ಲಿ ಸಾಗುತ್ತಿದ್ದಾನೆ.
ಇದು #ParivarJodoYatra ಯೋ ಅಥವಾ ದೇಶದ್ರೋಹಿಗಳ ಯಾತ್ರೆಯೋ? pic.twitter.com/uwLst8fzHA
— BJP Karnataka (@BJP4Karnataka) September 11, 2022
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಪರಿವಾರ ಜೋಡೋ ಯಾತ್ರೆಯ ವಿಶೇಷತೆಗಳು. ದುಬಾರಿ ಬೆಲೆಯ ವಸ್ತ್ರ ಧರಿಸಿ, ಕೋಟಿಗಟ್ಟಲೆ ಮೌಲ್ಯದ ಕಂಟೇನರ್‌ಗಳಲ್ಲಿ ವಾಸ್ತವ್ಯ ಮಾಡುತ್ತಾ ಬೆಲೆಯೇರಿಕೆಯ ಬಗ್ಗೆ ಟೀಕೆ! ಕಾಂಗ್ರೆಸ್ಸಿಗರೇ, ನಿಜಕ್ಕೂ ನಿಮ್ಮ ಯಾತ್ರೆಯ ಉದ್ದೇಶವೇನು?
ರಾಹುಲ್ ಗಾಂಧಿ #ParivarJodoYatra ಭಾಗವಾಗಿ ಹಿಂದೂಗಳ ವಿರುದ್ಧ ಸದಾ ಕೆಂಡಕಾರುವ ಪಾದ್ರಿಯೊಬ್ಬರನ್ನು ಭೇಟಿಯಾಗಿ ಧರ್ಮಸಂದೇಶ ಪಡೆದಿದ್ದಾರೆ. ಪಾದ್ರಿಯು, ತನ್ನ ಮತದ ದೇವರು ಮಾತ್ರ ನಿಜವಾದ ದೇವರು ಉಳಿದ ಧರ್ಮದ ದೇವರು ಸುಳ್ಳು ಎಂಬ ಜ್ಞಾನೋಪದೇಶ ನೀಡಿದ್ದಾನೆ. ಭಾರತ್ ಜೋಡೋ ಯಾತ್ರೆ ಈಗ ಹಿಂದೂ ವಿರೋಧಿ ಯಾತ್ರೆಯಾಗಿ ಬದಲಾಗುತ್ತಿದೆಯೇ ಎಂದು ಬರೆದಿಕೊಂಡಿದ್ದಾರೆ. Bangalore Anti-national forces in Bharat Jodo Yatra







