Bangalore | ಹುಟ್ಟಿನಿಂದಲೂ ಅಂಬರೀಷ್ ನಾಯಕರು : ಬೊಮ್ಮಾಯಿ
ಸ್ನೇಹಕ್ಕಾಗಿ ಅಂಬರೀಷ್ ಏನೂ ಬೇಕಾದರೂ ಮಾಡುತ್ತಿದ್ದರು. ಕರ್ನಾಟಕದ ಅಭಿವೃದ್ಧಿಯ ಕುರಿತು ಅನೇಕ ಕನಸು ಕಂಡಿದ್ದರು.
ಆದರೆ, ಅಧಿಕಾರಕ್ಕೆ ಅವರು ಎಂದೂ ಅಂಟಿಕೊಳ್ಳಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಕಂಠೀರವ ಸ್ಟುಡಿಯೋ ಆವರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ, ಅಂಬರೀಷ್ ನನ್ನ ಆತ್ಮೀಯ ಸ್ನೇಹಿತ ಆಗಿದ್ದರು. ನಾನು ಯಾವಾಗಲೂ ಅಂಬರೀಷ್ ಅಂತಾನೇ ಕರೆಯುತ್ತಿದ್ದೆ.
ಈಗಲೂ ನಾನು ಹಾಗೆಯೇ ಕರೆಯುತ್ತೇನೆ. ನನಗೆ ಅವರೊಂದಿಗೆ 40 ವರ್ಷಗಳ ಸ್ನೇಹವಿತ್ತು. ನಾವಿಬ್ಬರೂ ರಾಜ್ಯಾದ್ಯಂತ ಸಂಚರಿಸಿದ್ದೇವೆ, ಒಟ್ಟಾಗಿ ಕೆಲಸ ಮಾಡಿದ್ದೇವೆ.
ಅವರು ತಮ್ಮ ಆತ್ಮಸಾಕ್ಷಿಗೆ ಬದ್ಧರಾಗಿ ಬದುಕಿದ್ದರು. ಹುಟ್ಟಿನಿಂದಲೂ ಅವರು ನಾಯಕರು ಎಂದು ಅಂಬರೀಶ್ ಅವರನ್ನ ನೆನಸಿಕೊಂಡರು.
ಇನ್ನು ಅಂಬರೀಷ್ ಅವರು ‘ಸ್ನೇಹಕ್ಕಾಗಿ ಏನೂ ಬೇಕಾದರೂ ಮಾಡುತ್ತಿದ್ದರು. ರಾಜ್ಯದ ಅಭಿವೃದ್ಧಿಯ ಕುರಿತು ಅನೇಕ ಕನಸು ಕಂಡಿದ್ದರು.
ಆದರೆ, ಅಧಿಕಾರಕ್ಕೆ ಅವರು ಎಂದೂ ಅಂಟಿಕೊಳ್ಳಲಿಲ್ಲ. ಕಾವೇರಿ ಹೋರಾಟದಲ್ಲಿ ಅಧಿಕಾರ ತ್ಯಾಗ ಮಾಡಿದ ಏಕೈಕ ವ್ಯಕ್ತಿ ಅಂಬರೀಷ್ ಎಂದರು.
bangalore-cm-basavaraj-bommai ambarish memorial