Bangalore | ಮೊದಲು ಇವಿಎಂ..ಈಗ ಫೇಸ್ ಬುಕ್ : ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
ಬೆಂಗಳೂರು : ಕಪಿಲ್ ಸಿಬಲ್ ಉತ್ತಮ ವಕೀಲರಾಗಿರಬಹುದು,ಕಾಂಗ್ರೆಸ್ ಪಕ್ಷದ ನಾಯಕರಲ್ಲ ಎಂಬ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ವಿಚಾರಕ್ಕೆ ರಾಜ್ಯ ಬಿಜೆಪಿ ಘಟಕ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದೆ.
ಬಿಜೆಪಿ ತನ್ನ ಟ್ವೀಟ್ ನಲ್ಲಿ…
ಕುಟುಂಬ ರಾಜಕಾರಣವನ್ನು ವಿರೋಧಿಸಿದ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಅವರನ್ನು ನಕಲಿ ಗಾಂಧಿ ಕುಟುಂಬದ ಪಾದ ಪೂಜಕರು ಇನ್ನಿಲ್ಲದೆ ಕಾಡುತ್ತಿದ್ದಾರೆ. ಇಂತಹ ನಾಯಕರ ಮುಂದೆ ಪಕ್ಷ ಅಥವಾ ಗಾಂಧಿ ಕುಟುಂಬ ಎಂಬ ಎರಡು ಆಯ್ಕೆ ಇಟ್ಟರೆ ನಕಲಿ ಗಾಂಧಿಗಳ ಆಯ್ಕೆಯೇ ಅಂತಿಮವಾಗಬಹುದು. ಇದು ಗುಲಾಮಿತನವಲ್ಲದೆ ಮತ್ತೇನು ಎಂದು ಪ್ರಶ್ನಿಸಿದೆ.

ಜಿ 23 ನಾಯಕರು ಕಾಂಗ್ರೆಸ್ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಖರ್ಗೆ ಹೇಳಿಕೆಗೆ ಟಾಂಗ್ ಕೊಟ್ಟಿರುವ ಬಿಜೆಪಿ, ಪಾಳುಬಿದ್ದ ಮನೆಯಲ್ಲಿ ಎಷ್ಟು ದಿನ ತಾನೇ ಇರಲು ಸಾಧ್ಯ. ಒಬ್ಬೊಬ್ಬರೇ ಹೊರಬರುತ್ತಿದ್ದಾರೆ, ನಿಜಕ್ಕೂ ಬುದ್ದಿವಂತರವರು. ಕಾಂಗ್ರೆಸ್ ಅರಮನೆ ಶಿಥಿಲವಾಗಿದೆ. ನೆಲಸಮವಾಗುವ ಹಂತದಲ್ಲಿದೆ. ಒಳಗಿದ್ದರೆ ತಾವು ಪಳೆಯುಳಿಕೆಯಾಗುವ ಭಯ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಆದರೆ ಗುಲಾಮಿ ಮನಸ್ಥಿತಿಯವರು ಕುಟುಂಬ ಪೂಜೆಯಲ್ಲೇ ನಿರತರಾಗಿದ್ದಾರೆ ಎಂದು ಟೀಕೆ ಮಾಡಿದೆ.
ಸೋಶಿಯಲ್ ಮೀಡಿಯಾ ಪ್ರಭಾವ ಕೊನೆಗೊಳಿಸಲು ಸೋನಿಯಾ ಗಾಂಧಿ ಮನವಿ ವಿಚಾರಕ್ಕೆ ಟ್ವೀಟ್ ಮಾಡಿರುವ ಸೋನಿಯಾ ಗಾಂಧಿ, ನಕಲಿ ಗಾಂಧಿ ಕುಟುಂಬ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಹೊಣೆಯಿಂದ ನುಣುಚಿಕೊಳ್ಳುತ್ತಿದೆ. ಮೊದ ಮೊದಲು ಸೋಲಿಗೆ ಇವಿಎಂ ದೂರುತ್ತಿದ್ದ ಕಾಂಗ್ರೆಸ್, ಇಂದು ಫೇಸ್‌ಬುಕ್ ಸಂಸ್ಥೆಯನ್ನು ದೂರುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ʼಫೇಸ್ʼ ಸರಿ ಇಲ್ಲದಿರುವಾಗ ಫೇಸ್‌ಬುಕ್ ಮಾಧ್ಯಮವನ್ನು ದೂರಿ ಪ್ರಯೋಜನವೇನು ಎಂದು ಕುಟುಕಿದೆ.
bangalore-Congress- bjp mallikarjun kharge








