ಬೆಂಗಳೂರಲ್ಲಿ ಇಂದು 2,043 ಜನರಲ್ಲಿ ಕೋವಿಡ್ ಪಾಸಿಟಿವ್ covid
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ನಗರದಲ್ಲಿಂದು 2,043 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಬೊಮ್ಮನಹಳ್ಳಿಯಲ್ಲಿ 246, ದಾಸರಹಳ್ಳಿ 60, ಬೆಂಗಳೂರು ಪೂರ್ವ 242, ಮಹಾದೇವಪುರ 281, ಆರ್‍ಆರ್ ನಗರ 195, ಬೆಂಗಳೂರು ದಕ್ಷಿಣ 167,
ಬೆಂಗಳೂರು ಪಶ್ಚಿಮ 182 ಹಾಗು ಯಲಹಂಕದ 133 ಜನರಿಗೆ ಸೋಂಕು ವಕ್ಕರಿಸಿದೆ. ನಗರದಲ್ಲಿ ಪಾಸಿಟಿವಿಟಿ ಪ್ರಮಾಣ 4.91% ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ 7.89% ಇದೆ.
ನಿನ್ನೆ ನಗರದಲ್ಲಿ 1,992 ಪ್ರಕರಣಗಳು ಪತ್ತೆಯಾಗಿದ್ದವು. 199 ಮಂದಿ ಮೃತಪಟ್ಟಿದ್ದರು.









