12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೇ ಫೆಬ್ರವರಿ 26 ರಿಂದ ಮಾರ್ಚ್ 4 ವರೆಗೆ ನಡೆಯಲಿದೆ. ಫೆ. 26 ರಂದು ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಫೆ. 27 ರಿಂದ ಚಿತ್ರ ಪ್ರದರ್ಶನ ಪ್ರಾರಂಭಗೊಳಲಿದೆ. ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಒಟ್ಟು 200ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನವಾಗಲಿದೆ. ಬೆಂಗಳೂರಿನ ರಾಜಾಜಿನಗರದ ಒರಿಯಾನ್ ಮಾಲ್, ಚಾಮರಾಜಪೇಟೆಯ ಕಲಾವಿದರ ಸಂಘ, ಬನಶಂಕರಿಯ ಸುಚಿತ್ರ ಹಾಗೂ ಡಾ.ರಾಜ್ಕುಮಾರ್ ರಸ್ತೆಯ ನವರಂಗ್ ಚಿತ್ರಮಂದಿರ ಸೇರಿ ನಾಲ್ಕು ಸ್ಥಳದಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಒಟ್ಟು 14 ಸ್ಕ್ರೀನ್ ಗಳಲ್ಲಿ 400ಕ್ಕೂ ಹೆಚ್ಚು ಪ್ರದರ್ಶನ ಆಗಲಿದೆ.
ಈ ಸಿನಿಮೋತ್ಸವದಲ್ಲಿ ಕನ್ನಡದ 27 ಸಿನಿಮಾಗಳು, ಕೊಂಕಣಿಯ 1, ತುಳುವಿನ 1 ಸಿನಿಮಾ ಪ್ರದರ್ಶನ ಆಗಲು ಅವಕಾಶ ಪಡೆದುಕೊಂಡಿದೆ. ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ, ಏಷಿಯನ್ ಸಿನಿಮಾ ಸ್ಪರ್ಧಾ ಹೀಗೆ ವಿವಿಧ ವಿಭಾಗಗಳಲ್ಲಿ ಚಿತ್ರೋತ್ಸವದ ಸ್ಪರ್ಧೆ ನಡೆಯಲಿದೆ.
ಬೆಂಗಳೂರು ಚಿತ್ರೋತ್ಸವದಲ್ಲಿ ಕನ್ನಡ ಜನಪ್ರಿಯ ಸಿನಿಮಾಗಳಾದ ಬೆಲ್ ಬಾಟಂ, ಅವನೇ ಶ್ರೀಮನ್ನಾರಾಯಾಣ, ಪೈಲ್ವಾನ್, ಕವಲುದಾರಿ, ಮುಂದಿನ ಸಿಲ್ದಾಣ, ರಂಗನಾಯಕಿ, ಸವರ್ಣದೀರ್ಘ ಸಂಧಿ, ಕಿಸ್, ಸೇರಿದಂತೆ ಅನೇಕ ಸಿನಿಮಾಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನಗೊಳದೆ.
ಟ್ರಂಪ್ ಜೊತೆ ಮಾತುಕತೆ ಇಲ್ಲ: IRGC ಕಠಿಣ ಎಚ್ಚರಿಕೆ
ಒಂದು ಕಡೆ ಡೊನಾಲ್ಡ್ ಟ್ರಂಪ್ ಹಾಗೂ ಅಮೆರಿಕದ ಮಾಧ್ಯಮಗಳು ಶಾಂತಿ ಮಾತುಕತೆಗಳ ಬಗ್ಗೆ ಹೇಳುತ್ತಿದ್ದರೆ, ಇನ್ನೊಂದು ಕಡೆ ಇಸ್ಲಾಮಿಕ್ ರೆವ್ಯೂಲೇಷನರಿ ಗಾರ್ಡ್ ಕಾರ್ಪ್ಸ್ (IRGC) ಇದನ್ನು ಸಂಪೂರ್ಣವಾಗಿ...








