Bangalore | ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವ ಬಿಜೆಪಿಗರಿಂದ ಮಾನವೀಯತೆ ನಿರೀಕ್ಷೆ ಮೂರ್ಖತನ
ಬೆಂಗಳೂರು : ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವ ಅಭ್ಯಾಸವಿರುವ ಬಿಜೆಪಿಗರಿಂದ ಮಾನವೀಯ ಅಂತಃಕರಣವನ್ನು ನಿರೀಕ್ಷಿಸುವುದು ಮೂರ್ಖತನ ಎನ್ನಬಹುದು ಎಂದು ರಾಜ್ಯ ಬಿಜೆಪಿ ವಿರುದ್ಧ ಕಾಂಗ್ರೆಸ್ ಘಟಕ ಕಿಡಿಕಾರಿದೆ.
ಟ್ವಿಟ್ಟರ್ ನಲ್ಲಿ ಬಿಜೆಪಿ ವಿರುದ್ಧದ ಸರಣಿ ಟ್ವೀಟ್ ಗಳ ಮೂಲಕ ಕಿಡಿಕಾರಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ರಾಜತಾಂತ್ರಿಕ ಲೋಪಗಳ ಪರಿಣಾಮ ಭಾರತೀಯರು ಉಕ್ರೇನ್ ಪ್ರಜೆಗಳ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ, ಅಲ್ಲದೆ ಜೀವಭಯದಲ್ಲಿ ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ. ಇಂತಹ ಗಂಭೀರ ಸ್ಥಿತಿಯಲ್ಲಿ ಪ್ರಧಾನಿ ‘ಹಾಡುಗಳಿಗೆ ಲಿಪ್ ಸಿಂಕ್ ಮಾಡಿ‘ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಾ ಕಾಲಹರಣ ಮಾಡುತ್ತಿರುವುದು ‘ರಾಷ್ಟ್ರೀಯ ದುರಂತ‘!
https://twitter.com/INCKarnataka/status/1498325050285760513?s=20&t=KmcuFesfY66rgpm4t8IvEw
ಸಾವಿರಾರು ಕನ್ನಡಿಗ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿದ್ದಾರೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಗಂಭೀರವಾಗಿ ಚಿಂತಿಸದೆ ಹೃದಯಶೂನ್ಯರಾಗಿ ವರ್ತಿಸುತ್ತಿರುವುದು ದುರಂತ. ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವ ಅಭ್ಯಾಸವಿರುವ ಬಿಜೆಪಿಗರಿಂದ ಮಾನವೀಯ ಅಂತಃಕರಣವನ್ನು ನಿರೀಕ್ಷಿಸುವುದು ಮೂರ್ಖತನ ಎನ್ನಬಹುದು.
ಉಕ್ರೇನ್ನ ಯುದ್ಧಕಣದಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಜೀವಭಯದ ವಾತಾವರಣದಲ್ಲಿ ಸಿಲುಕಿ ನರಳುತ್ತಿದ್ದಾರೆ, ಆದರೆ ಇಲ್ಲಿ ಪ್ರಧಾನಿ ಹಾಗೂ ಬಿಜೆಪಿಗರು ಮೂರು ಮತ್ತೊಂದು ಜನರನ್ನು ಕರೆತಂದು ಚುನಾವಣೆಗೆ ‘ಪಿಆರ್ ಸ್ಟಂಟ್‘ ಮಾಡುತ್ತಿರುವುದು ಅತೀ ನಾಚಿಕೆಗೇಡಿನ ವಿಚಾರ. ದುರಂತಗಳಲ್ಲಿ ಅವಕಾಶವಾದಿನ ತೋರುವುದೇ ಬಿಜೆಪಿಯ ವಿಕೃತ ಗುಣ ಎಂದು ಕಟುವಾಗಿ ಟೀಕಿಸಿದೆ. Bangalore-Karnataka bjp congress tweet war








